ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಜೂ. 20,21,22 ರಂದು ಬಿ.ಸಿ.ರೋಡು ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯುವ “ತುಳುವೆರೆನ ತುಳುನಾಡ ಸಂತೆ” ಮಾವು ಹಲಸುಗಳೊಂದಿಗೆ ಸಾಹಿತ್ಯ ಸಾಂಸ್ಕೃತಿಕ ರಂಗಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ನಡೆಯಿತು.
ಪೂಜೆ ನೆರವೇರಿಸಿ ತುಳುಕೂಟದ ಅಧ್ಯಕ್ಷರಾದ ಸುದರ್ಶನ್ ಜೈನ್ ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂಧರ್ಭ ತುಳುಕೂಟ ಬಂಟ್ವಾಳದ ಕಾರ್ಯದರ್ಶಿ ಎಚ್ಕೆ ನಯನಾಡು, ಕೋಶಾದಿಕಾರಿ ಸುಭಾಶ್ಚಂದ್ರ ಜೈನ್,ಉಪಾಧ್ಯಕ್ಷರಾದ ಕೆ.ಸೀತಾರಾಮ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ತ್ ಸದಸ್ಯರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಸಮಿತಿ ಸಂಚಾಲಕರಾದ ಸೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ ಸಿ.ಪೆರ್ನೆ, ಪರಮೇಶ್ವರ ಮೂಲ್ಯ, ಮೋಹನ್ ಶೆಟ್ಟಿ ಪಂಜಿಕಲ್ಲು, ಚಂದ್ರಶೇಖರ್ ಗಟ್ಟಿ, ಸತೀಶ್ ಕುಮಾರ್ ಕಾರ್ತಿಕ್, ಸನ್ಮತಿ ಜೆ.ಜೈನ್ ಉಪಸ್ಥಿತರಿದ್ದರು
Be the first to comment on "ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ತುಳುವೆರೆನ ತುಳುನಾಡ ಸಂತೆ: ಆಮಂತ್ರಣ ಪತ್ರಿಕೆ ಬಿಡುಗಡೆ"