ಬಂಟ್ವಾಳ: ‘’ತುಳುಕೂಟ ಬಂಟ್ವಾಳದ ಅಟ್ಟನೆಡ್ ತುಳುವೆರೆನ ತುಳುನಾಡ ಸಂತೆ, ಕುಕ್ಕು ಪೆಲಕಾಯಿದ ಒಟ್ಟು…, ತುಳು ಸಾಹಿತ್ಯ, ಸಾಂಸ್ಕೃತಿಕ ರಂಗ್.. ಜೂನ್ 20, 21, 22ರಂದು ನಡೆಯಲಿದೆ‘’ – ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು ಈ ಕುರಿತು ಕಾರ್ಯಕ್ರಮ ನಡೆಯಲಿರುವ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬುಧವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಕಾರ್ಯಕ್ರಮದ ಯಶಸ್ಸಿಗಾಗಿ ತುಳುಕೂಟದ ಸದಸ್ಯರು ಶ್ರಮ ವಹಿಸುತ್ತಿದ್ದಾರೆ. ಜೂನ್ 20ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು, ಸಂತೆಯನ್ನು ಶಾಸಕ ರಾಜೇಶ್ ನಾಯ್ಕ್, ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ತುಳು ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ರಂಗ್ ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ. ಅಪರಾಹ್ನ 3.30ಕ್ಕೆ ತುಳು ಪದರಂಗಿತ, ಸಂಜೆ 5.340ಕ್ಕೆ ಬಲೆ ತೆಲಿಪಾಲೆ, ಬಲೆ ಬುಲಿಪಾಲೆ ನಡೆಯಲಿದೆ. 21ಂದು ಶನಿವಾರ ಬೆಳಗ್ಗೆ 10ಕ್ಕೆ ಹಣ್ಣುಹಂಪಲುಗಳ ಕೃಷಿ ಮತ್ತು ವಿವಿಧ ಉತ್ಪನ್ನ ತಯಾರಿ ಹಾಗು ಮಾಹಿತಿ ವಿಚಾರಗೋಷ್ಠಿ ಉದ್ಘಾಟನೆಗೊಳ್ಳುವುದು. 12 ಗಂಟೆಗೆ ತುಳುವೆರೆ ಪದಗೊಂಚಿಲ್, ಹಲಸು, ಮಾವುಗಳಿಗೆ ಸಂಬಂಧಪಟ್ಟ ಸ್ಪರ್ಧೆ, ಮಧ್ಯಾಹ್ನ 2.30ಕ್ಕೆ ಬಹುಭಾಷಾ ಕವಿಗೋಷ್ಠಿ, ಸಂಜೆ 4.30ಕ್ಕೆ ಯಕ್ಷಗಾನ ನೃತ್ಯ ವೈಭವ, ಸಂಜೆ 6ಕ್ಕೆ ನೃತ್ಯಗಾನ ಸಂಭ್ರಮ ನಡೆಯುವುದು. 22ರಂದು ಭಾನುವಾರ ತುಳುಕೂಟ ಬಂಟ್ವಾಳ ಜೊತೆಗೆ ನೇತ್ರಾವತಿ ಕೃಷಿಕರ ಅಭಿವೃದ್ಧಿ ಒಕ್ಕೂಟ, ತೋಟಗಾರಿಕಾ ಇಲಾಖೆ ವತಿಯಿಂದ ಕೃಷಿ ಗೇನ, ಸಾಂಸ್ಕೃತಿಕ ಅಂಗಣ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪದಲ್ಲಿ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸುವರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸುವರು. ಹಿರಿಯ ಕೃಷಿಕರಾದ ಕೊರಗಪ್ಪ ಮೂಲ್ಯ ಮಣಿಹಳ್ಳ ಮತ್ತು ಸದಾಶಿವ ಶೆಟ್ಟಿಗಾರ್ ಅಣ್ಣಳಿಕೆ ಅವರನ್ನು ಸನ್ಮಾನಿಸಲಾಗುವುದು. ಸಂಜೆ ನೃತ್ಯ ಸಿಂಚನ, ಮೋಕೆದ ಕಲಾವಿದೆರ್ ಅವರಿಂದ ನಾಟಕ ನಡೆಯಲಿದೆ ಎಂದು ಸುದರ್ಶನ ಜೈನ್ ವಿವರ ನೀಡಿದರು.
ತುಳುಕೂಟ ಕಾರ್ಯದರ್ಶಿ ಎಚ್ಕೆ ನಯನಾಡು, ಕಾರ್ಯಕ್ರಮದ ಸಹಸಂಚಾಲಕ ಸೀತಾರಾಮ ಶೆಟ್ಟಿ, ಸಂಚಾಲಕ ಹಾಗೂ ತುಳುಕೂಟ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಸ್ವಾಗತ ಸಮಿತಿ ಸಂಚಾಲಕ ಸುಕುಮಾರ ಬಂಟ್ವಾಳ, ನೋಂದಾವಣೆ ಸಮಿತಿ ಸಂಚಾಲಕ ಚಂದ್ರಶೇಖರ ಗಟ್ಟಿ, ವಿಚಾರಗೋಷ್ಠಿ ಸಂಚಾಲಕ ರವೀಂದ್ರ ಕುಕ್ಕಾಜೆ, ಕೃಷಿ ಗೋಷ್ಠಿಯ ಸಂಚಾಲಕ ದೇವಪ್ಪ ಕುಲಾಲ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ನಾರಾಯಣ ಸಿ.ಪೆರ್ನೆ, ವಸ್ತುಪ್ರದರ್ಶನ ಸಮಿತಿ ಸಂಚಾಲಕ ಮಧುಸೂಧನ ಶೆಣೈ, ಪ್ರಚಾರ ಸಮಿತಿ ಸಂಚಾಲಕ ಸತೀಶ್ ಕುಮಾರ್ ಬಂಟ್ವಾಳ, ವಿವಿಧ ಪ್ರಮುಖರಾದ ಮ್ಯಾಥ್ಯೂ, ಮೋಹನ್ ಸಾಲಿಯಾನ್, ಸದಾಶಿವ ಪುತ್ರನ್, ಮೋಹನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ತುಳುಕೂಟ ಬಂಟ್ವಾಳದ ಅಟ್ಟನೆಡ್ ತುಳುವೆರೆನ ತುಳುನಾಡ ಸಂತೆ – ವಿವರಗಳು ಇಲ್ಲಿವೆ"