ಪಾಣೆಮಂಗಳೂರು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಗೊಳ್ಳಲು ಒತ್ತಾಯಿಸಿ ಹಾಗೂ ಸೇತುವೆಯನ್ನು ಬಂದ್ ಮಾಡದಂತೆ ಒತ್ತಾಯಿಸಿದ್ದಾರೆ.
ಪಾಣೆಮಂಗಳೂರಿನ ಸಾರ್ವಜನಿಕರು ಪುರಸಭಾ ಸದಸ್ಯರಾದ ಸಿದ್ದೀಕ್ ಗುಡ್ಡೆಯಂಗಡಿ ಹಾಗೂ ಇದ್ರೀಸ್ ಪಿ.ಜೆ. ಸಹಿತ ಪ್ರಮುಖರು ಈ ಸಂದರ್ಭ ಹಾಜರಿದ್ದರು. ಈ ಕುರಿತು ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಮಾತನಾಡಿ, ಈಗಾಗಲೇ ಪುರಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದ್ದು, ಸೇತುವೆಯಲ್ಲಿ ಡ್ಯಾಮೇಜ್ ಆಗಿಲ್ಲ, ಕೇವಲ ಡಾಂಬರು ಎದ್ದುಹೋಗಿದೆ, ಮುಖ್ಯಾಧಿಕಾರಿಯವರೊಂದಿಗೆ ಮಾತನಾಡಲಾಗಿದ್ದು, ಸೇತುವೆ ಹೇಗಿದೆ ಎಂಬುದನ್ನು ಪರಿಶೀಲನೆ ನಡೆಸಲಿ. ಎಲ್ಲರೂ ಒಕ್ಕೊರಲಾಗಿ ನಾವು ಮನವಿ ನೀಡಿದ್ದೇವೆ. ಮುಖ್ಯಾಧಿಕಾರಿಯವರು ಯಥಾಸ್ಥಿತಿಯಲ್ಲಿ ವಾಹನ ಓಡಲಿ ಎಂದು ತಿಳಿಸಿದ್ದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಡಾಂಬರು ಹಾಕಿ ಅಭಿವೃದ್ಧಿಯಾಗಲಿ ಎಂದು ಹೇಳಿದರು.
Be the first to comment on "ಪಾಣೆಮಂಗಳೂರು ಸೇತುವೆ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮನವಿ"