ರಹಿಮಾನ್ ಹತ್ಯೆಯ ಸೂತ್ರಧಾರಿಗಳನ್ನು ಕಂಡುಹಿಡಿಯಬೇಕು, ಅಮಾಯಕರನ್ನು ಧರ್ಮಾಧಾರಿತವಾಗಿ ಹತ್ಯೆ ಮಾಡುವುದು ನೋವಿನ ಸಂಗತಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇಂಥ ಘಟನೆ ಖಂಡನೀಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಚಿತರೇ ಇದನ್ನು ಮಾಡಿದ್ದು ಭಯ ಹುಟ್ಟಿಸುವ ಘಟನೆಯಾಗಿದ್ದು, ಇದರ ಸೂತ್ರಧಾರಿಗಳನ್ನು ಕಂಡುಹಿಡಿಯಬೇಕು. ಘರ್ಷಣೆ ಆಗಲು ಪ್ರಚೋದನಕಾರಿ ಭಾಷಣ ಮಾಡುವುದು, ಇದಕ್ಕೆ ತುಪ್ಪ ಸುರಿಯುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.
ನೋವನ್ನು ತೋಡಿಕೊಳ್ಳುವ ವೇಳೆ ವ್ಯತ್ಯಾಸಗಳು ಕಂಡುಬರುವುದು ಸಹಜ. ಆದರೆ ಅಂತಹ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಪಕ್ಷ ಯಾವುದೇ ಕ್ರಮ ಕೈಗೊಳ್ಳಬಾರದು. ಎಲ್ಲರನ್ನು ಒಂದುಗೂಡಿಸಿಕೊಂಡು ಮುಂದೆ ಹೋಗುವುದು ನಾಯಕರಾದವರ ಜವಬ್ದಾರಿಯಾಗಿದೆ ಎಂದರು.
ಡೆಂಗ್ಯು ಪ್ರಕರಣ ಹತೋಟಿಗೆ ತರುವ ಕೆಲಸ ಜಿಲ್ಲಾಡಳಿತಣ ಆರೋಗ್ಯ ಇಲಾಖೆ ಕೈಗೊಳ್ಳಲು ರಮಾನಾಥ ರೈ ಒತ್ತಾಯಿಸಿದರು. ಈಗಾಗಲೇ ತಾಲೂಕಿನಲ್ಲಿ ಡೆಂಗ್ಯೂಗೆ ಓರ್ವ ವಿದ್ಯಾರ್ಥಿ ಬಲಿಯಾಗಿದ್ದು,ಪಂಜಿಕಲ್ಲುವಿನಲ್ಲಿ ಎರಡು ಪ್ರಕರಣಗಳು ಸಕ್ರೀಯವಾಗಿದೆ.ಹೀಗೆ ತಾಲೂಕಿನಲ್ಲಿ ಜನರು ಜಾಗೃತೆ ವಹಿಸಬೇಕು. ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಿ ಡೆಂಗ್ಯೂ ತಡೆಗೆ ಮುಂದಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಪ್ರಮುಖ ಮುಖಂಡರಾದ ಪಿಯೂಸ್ ಎಲ್ ರೋಡ್ರಿಗಸ್, ಸುದರ್ಶನ ಜೈನ್ ಪಂಜಿಕಲ್ಲು, ಬಿ.ಎಂ. ಅಬ್ಬಾಸ್ ಆಲಿ, ಪದ್ಮನಾಭ ರೈ, ಸುದೀಪ್ ಕುಮಾರ್ ಶೆಟ್ಟಿ, ದೇವಪ್ಪ ಕುಲಾಲ್ ಪಂಜಿಕಲ್ಲು, ಮಧುಸೂದನ್ ಶೆಣೈ, ವೆಂಕಪ್ಪ ಪೂಜಾರಿ, ಡೆನ್ಝಿಲ್ ನೊರೊನ್ಹ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಹತ್ಯೆ ಸೂತ್ರಧಾರಿಗಳ ಪತ್ತೆಹಚ್ಚಿ, ಅಮಾಯಕರ ಹತ್ಯೆ ನೋವಿನ ಸಂಗತಿ: ರಮಾನಾಥ ರೈ"