ಬಂಟ್ವಾಳ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿಸೋಮವಾರ ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ಮಣ್ಣು ಆರೋಗ್ಯ ಚೀಟಿ ವಿತರಣೆ ಹಾಗೂ ಬೀಜೋಪಚಾರ ತರಬೇತಿ ಹಾಗೂ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ವಿಕಸಿತ್ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಡಿ ವೈಜ್ಞಾನಿಕ ಬೋರ್ಡೋ ದ್ರಾವಣ ತಯಾರಿ ಕುರಿತು ಪ್ರಾತ್ಯಕ್ಷಿಕೆ ಜರಗಿತು.
ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ ಪದ್ಮರಾಜ ಬಲ್ಲಾಳ್ ಮಾವಂತೂರು ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಉಳ್ಳಾಲ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ದೇವದಾಸ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಉಪ ವಿಭಾಗದ ಉಪ ಕೃಷಿ ನಿರ್ದೇಶಕರಾದ ಕುಮುದಾ ಪ್ರಸ್ತಾವನೆಗೈದರು. ಕೃಷಿ ಅಧಿಕಾರಿ ನಂದನ್ ಶೆಣೈ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಹರೀಶ್ ಶೆಣೈ, ಡಾ. ರಶ್ಮಿ ಹಾಗೂ ಡಾ. ಬಿಂದು ಸುಲೋಚನ ಬೀಜೋಪಚಾರ ಪ್ರಾತ್ಯಕ್ಷಿಕೆ ಹಾಗೂ ಸಮಗ್ರ ಪೋಷಕಾಂಶ ಕುರಿತು ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕಾ ನಿರ್ದೇಶಕರಾದ ದಿನೇಶ್ ತೋಟಗಾರಿಕಾ ಇಲಾಖೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಅವಿನಾಶ್ ಭಟ್, ಪಶು ಸಂಗೋಪನಾ ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್ ಕೃಷಿ ಇಲಾಖೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಬಂಟ್ವಾಳ ಹಾಗೂ ಉಳ್ಳಾಲ ತಾಲೂಕು ಕೃಷಿಕ ಸಮಾಜದ ಸದಸ್ಯರು, ರೈತ ಬಾಂಧವರು ಹಾಗೂ ಕೃಷಿ ಸಖಿಯವರು ಪಾಲ್ಗೊಂಡರು. ಪಾಣೆಮಂಗಳೂರು ಹೋಬಳಿ ಆತ್ಮ ಯೋಜನೆ ಎ. ಡಿ.ಎಂ ಹನುಮಂತ ಕಾಳಗಿ ಕಾರ್ಯಕ್ರಮ ನಿರೂಪಿಸಿದರು. ಹೋಬಳಿ ಆತ್ಮ ಯೋಜನೆಯ ವಿರೂಪಾಕ್ಷಿ ವಂದನಾರ್ಪಣೆ ಮಾಡಿದರು. ಇಲಾಖೆ ಸಿಬ್ಬಂದಿಗಳಾದ ವಿನೀತ್, ವೀಣಾ ಡಿಸೋಜಾ, ಸಂದೀಪ್ ಸಹಕರಿಸಿದರು.
Be the first to comment on "ಕೃಷಿ ಇಲಾಖೆಯಿಂದ ಆರೋಗ್ಯ ಚೀಟಿ ವಿತರಣೆ, ಬೀಜೋಪಚಾರ ತರಬೇತಿ"