ಜೇಸಿ ಜೋಡುಮಾರ್ಗ ನೇತ್ರಾವತಿ ವತಿಯಿಂದ ಆಕ್ಯೂಪ್ರೆಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸಾ ಶಿಬಿರ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿದೆ.
ಜೇಸಿ ಜೋಡುಮಾರ್ಗ ಅಧ್ಯಕ್ಷೆ ತೃಪ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಕ್ಯುಪ್ರೆಶರ್ ಮತ್ತು ಸುಜೋಜಕ್ ಎಂಬುದು ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದ್ದು, ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಿದರ ಸದುಪಯೋಗವನ್ನು ಬಿ.ಸಿ.ರೋಡ್ ಸುತ್ತಮುತ್ತಲಿನ ಸಾರ್ವಜನಿಕರು ಪಡೆದುಕೊಳ್ಳಬೇಕು, ಬಿ.ಸಿ.ರೋಡ್ ವಿನಾಯಕ ರಸ್ತೆ, ಶ್ರೀ ರಕ್ತೇಶ್ವರಿ ದೇವಸ್ಥಾನದ ಹಿಂಬದಿ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಬೆಳಗ್ಗೆ 8ರಿಂದ 12ರವರೆಗೆ ಹಾಗೂ ಸಂಜೆ 3ರಿಂದ 8ರವರೆಗೆ ಚಿಕಿತ್ಸಾ ಶಿಬಿರ ಜೂನ್ 7ರವರೆಗೆ ನಡೆಯಲಿದೆ ಎಂದರು. ಈ ಸಂದರ್ಭ ಜೇಸಿ ಪೂರ್ವಾಧ್ಯಕ್ಷ ಪಿ.ಮಹಮ್ಮದ್, ವೈದ್ಯರಾದ ಡಾ. ಎಂ.ಆರ್. ಜಕ್ಕರ್, ಡಾ. ರಮೇಶ್ ಚೌಧರಿ, ವಲಯ ಸಂಯೋಜಕಿ ಗಾಯತ್ರಿ ಲೋಕೇಶ್ ಉಪಸ್ಥಿತರಿದ್ದರು,. ಜೋಡುಮಾರ್ಗ ಜೇಸಿ ಉಪಾಧ್ಯಕ್ಷೆ ಕೀರ್ತಿ ವಂದಿಸಿದರು.
Be the first to comment on "ಆಕ್ಯುಪ್ರೆಶರ್, ಸುಜೋಕ್ ಚಿಕಿತ್ಸಾ ಶಿಬಿರಕ್ಕೆ ಚಾಲನೆ"