ತಂಬಾಕು ಉತ್ಪನ್ನಗಳ ಮಾರಕ ಪರಿಣಾಮಗಳೇನು? ಯಾಕೆ ನಿಷೇಧಿಸಬೇಕು ಎನ್ನುತ್ತಾರೆ? ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಸಮುದಾಯ ಕಾರ್ಯನಿರ್ವಾಹಕ ಸುರೇಶ್ ನಾವೂರು ಬರೆಯುತ್ತಾರೆ

ತಂಬಾಕು ವಿರೋಧಿ ದಿನಾಚರಣೆ ಇಂದು. ಈ ಹಿನ್ನೆಲೆಯಲ್ಲಿ ಲೇಖಕ ಸುರೇಶ್ ನಾವೂರು ಇದರ ದುಷ್ಪರಿಣಾಮಗಳು ಹಾಗೂ ನಿಷೇಧದ ಅಗತ್ಯದ ಕುರಿತು ಮಾಹಿತಿ ನೀಡಿದ್ದಾರೆ.

  • ಸುರೇಶ್ ಎಸ್ ನಾವೂರು, ನಾಟಕ ರಚನೆಕಾರರು, ಸಮುದಾಯ ಕಾರ್ಯನಿರ್ವಾಹಕರು, ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ.

ತಂಬಾಕು ಹಾಗೂ ತಂಬಾಕು ಉತ್ಪನ್ನಗಳು ಬಹಳ ಮಾರಕ ವಸ್ತುಗಳಾದರೂ,ಇಂದು ಹೆಚ್ಚಿನ ಕಡೆ ಬದುಕಿನ ಅವಿಭಾಜ್ಯ ಎನ್ನುವಂತಿದೆ.ಅಷ್ಟು  ಹತ್ತಿರದಲ್ಲಿದೆ. ತಂಬಾಕು ಹಾಗೂ ತಂಬಾಕು ಉತ್ಪನ್ನಗಳು ಮನುಷ್ಯನ ಮೇಲೆ ಕೆಟ್ಟ ಪ್ರಭಾವ ಬೀರುವುದರ ಜೊತೆಗೆ ಪರಿಸರದ ಮೇಲೆಯೂ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ ಎಂಬುದು ಸಮಾಜ ಬಹಳ ಗಂಭೀರವಾಗಿ ಗಮನಿಸಬೇಕಿದೆ.

ತಂಬಾಕಿನಲ್ಲಿ 70 ಕ್ಕೂ ಹೆಚ್ಚು ರಾಸಾಯನಿಕ ಪದಾರ್ಥಗಳಿದ್ದು ಇದನ್ನು ಕ್ಯಾನ್ಸರ್ ನ ಜನಕ ಎಂದು ಕರೆಯುತ್ತಾರೆ. ಮಾರಕ ರೋಗ ಕ್ಯಾನ್ಸರ್ ಸೇರಿದಂತೆ ಹೃದಯಾಘಾತ,ಶ್ವಾಸಕೋಶ,ಯಕೃತ್ತು ಹಾಗೂ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಧೂಮಪಾನ ಮಾಡುವ ಗರ್ಭಿಣಿ ಮಹಿಳೆಯ ಜೊತೆಗೆ ಕಡಿಮೆ ತೂಕದ ಮಗು ಹುಟ್ಟ ಬಹುದು ಎನ್ನುತ್ತದೆ ವೈದ್ಯಕೀಯ ಕ್ಷೇತ್ರ. ತಂಬಾಕು ಅಥಾವ ಇದರ ಉತ್ಪನ್ನ ಸೇವನೆಯು ಕೈಗಳು ಬಾಯಿಯೊಳಗೆ ಹೋಗದಂತೆ ತಡೆಯುವ ಸಮಸ್ಯೆ ಕಾಣಸಿಗುತ್ತದೆ. ಇದು ಎಷ್ಟು ತೀವ್ರವಾಗಿದೆ ಅಂದರೆ ಆಹಾರ ಸೇವನೆಗೂ ಬಾಯಿ ತೆರೆಯದಂತೆ ಹಾಗೂ ಕೈ ಬೆರಳು ಕೂಡ ಹೋಗದ ಪರಿಸ್ಥಿತಿಯನ್ನು ತಂದಿಡಬಹುದು.

ಇನ್ನೂ ಪ್ಯಾಕೆಟ್ ನಲ್ಲಿ ಬರುವ ತಂಬಾಕೆಂಬ ರಾಸಾಯನಿಕ ವಿಷ ಮಾನವನ ದೇಹದೊಳಗೆ ತುಂಬಿಕೊಂಡರೆ,ಮನುಷ್ಯನ ಬದುಕಿಗೆ ಮುಳುವಾಗುವುದರ ಜೊತೆಗೆ ಅದರ ಪ್ಲಾಸ್ಟಿಕ್‌ ತ್ಯಾಜ್ಯ ಪದಾರ್ಥ ಹಾಗೂ ತಂಬಾಕು ಸೇವನೆ ಮಾಡಿ ಉಗಿದ ರಸಾಯನಿಕ ರಸಗಳು ಭೂಮಿ ತಾಯಿಯ ಒಡಲಿನ ಕಡಲನ್ನು ಸೇರಿಕೊಂಡರೆ ,ಮಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುವುದು  ಪ್ರಕೃತಿಯಲ್ಲಿರುವ ಗಿಡಗಳು ಸೇರಿದಂತೆ ವಿವಿಧ ಪ್ರಾಣಿ ಸಂಕುಲಗಳಿಗೆ ವಿನಾಶಕಾರಿಯಾಗಿ ಪರಿಣಮಿಸುತ್ತಿದೆ ಎಂಬುದು ಕೂಡ ಅರಿಯಬೇಕಾದ ವಾಸ್ತವ ಸತ್ಯ.

ತಂಬಾಕು ಉತ್ಪನ್ನಗಳಲ್ಲಿ ಒಂದಾದ ಬೀಡಿ ಸಿಗರೇಟ್,ಸೇದುವ ವ್ಯಕ್ತಿಗೆ ಹಾನಿ ಮಾಡುವುದಲ್ಲದೆ ಅದರಿಂದ ಬರುವ ಹೊಗೆಯು ಜೊತೆಗೆ ಇರುವ ವ್ಯಕ್ತಿ ಅಥಾವ ಮನೆಯ ಇತರ ಸದಸ್ಯರು ಹಾಗೂ ಪರಿಸರಕ್ಕೂ ಹಾನಿ ಮಾಡುತ್ತದೆ ಎಂದು ವೈಜ್ಞಾನಿಕ ಕ್ಷೇತ್ರ ಸಾರಿ ಹೇಳುವ ವಿಚಾರ‌ ಇದು ಸಾಮಾಜಿಕ ಹಾಗೂ ಕೌಂಟುಬಿಕ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುತ್ತದೆ.

ತಂಬಾಕು ಹಾಗೂ ಮಾನಸಿಕ ಆರೋಗ್ಯ.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ತಂಬಾಕು ಸೇವನೆ ಮಾನಸಿಕ ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ. ತಂಬಾಕು ಹಾಗೂ ಉನ್ಪತ್ನದಲ್ಲಿ ನಿಕೋಟಿನ್ ರಸಾಯನಿಕ ವಸ್ತು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕುತೂಹಲ,ಸ್ನೇಹಿತರ ಒತ್ತಾಯ, ಹೀಗೆ ಯಾವುದೋ ಒಂದು ಕಾರಣಗಳಿಂದ ಹುಟ್ಟಿಕೊಂಡ ತಂಬಾಕು ಬಳಕೆ ಮುಂದೆ ತಂಬಾಕು ಉತ್ಪನ್ನಗಳು ಇಲ್ಲದೆ ದೈನಂದಿನ ಕಾರ್ಯಗಳಲ್ಲಿ ನಿರಾಸಕ್ತಿ, ಏನೋ ಕಳೆದುಕೊಂಡ ಭಾವನೆ, ಮನಸ್ಥಿತಿಯಲ್ಲಿ ಏರುಪೇರು, ಕೋಪ,ಕಿರಿಕಿರಿ ಹೀಗೆ ವಿವಿಧ ಸಮಸ್ಯೆಗಳು ಸಮಾನ್ಯವಾಗಿ ಕಾಡಿದರೆ, ಇನ್ನೂ ಒತ್ತಡ,ಖಿನ್ನತೆ,ಆತಂಕ,‌ಹೀಗೆ ವಿವಿಧ ಮಾನಸಿಕ ಸಮಸ್ಯೆಗಳು ಕೂಡ ಸಂಭವಿಸಬಹುದು. ಮೆದುಳಿನ ಸಮಸ್ಯೆ ಹಾಗೂ ನೆನಪು ಶಕ್ತಿ ಇಲ್ಲದೆ ಇರುವುದು, ದೈನಂದಿನ ಜೀವನದ ಮೇಲೆ ಬಹಳ ನಕಾರಾತ್ಮಕ ಪ್ರಭಾವ ಬೀರಬಹುದು. ಅತಿಯಾದ ತಂಬಾಕು ಬಳಕೆಯನ್ನು ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯದೆ ತಕ್ಷಣ ನಿಲ್ಲಿಸಿದರೆ ಹಿಂತೆಗೆದ ಚಿಹ್ನೆಗಳ ತೀವ್ರ ಸ್ವರೂಪದಲ್ಲಿ   ಕಂಡು ಬರಬಹುದು.ಇದನ್ನು ಮೆಡಿಕಲ್ ಎಮರ್ಜೆನ್ಸಿ ಎನ್ನಬಹುದು.

ದೈಹಿಕವಾಗಿ ಎದೆ ಬಿಗಿತ. ನಿದ್ರೆಯ ಸಮಸ್ಯೆ ತಲೆ ಸುತ್ತು ಮಲಬದ್ಧತೆ  ತಲೆನೋವು . ಹಸಿವು ತೂಕ ಹೆಚ್ಚಾಗುವುದು ವಾಕರಿಕೆ ಬರುವುದು,ಇನ್ನೂ ಮಾನಸಿಕವಾಗಿ ಅಸ್ವಸ್ಥತೆ, ನಡುಕ, ಉದ್ರೇಕ ಕೋಪದ ಭಾವನೆ  ಖಿನ್ನತೆ ಹೀಗೆ ಮಾನಸಿಕವಾದ ಸಮಸ್ಯೆಗಳು ಕೂಡ ಕಂಡು ಬರಬಹುದು. ಮನರಂಜನಾ ಕ್ಷೇತ್ರದಲ್ಲಿ ಅಥಾವ ಯಾವುದೋ ಸಲಬಿಟ್ರಿಯ ಪೋಟೋ ವಿಡಿಯೋ, ಸೇವನೆ ಮಾಡುವ ತನ್ನದೆ ಕುಟುಂಬದ ಸದಸ್ಯರನ್ನು ನೋಡಿದ ಕುತೂಹಲಗಳು ಹತ್ತಿರದಲ್ಲಿಯೇ ಕಡಿಮೆ ದರದಲ್ಲಿ ಈ ವಸ್ತು ಸಿಗುವುದ್ದರಿಂದ ಮಕ್ಕಳು ವ್ಯಸನಿಗಳಾಗಿ ದಾರಿ ತಪ್ಪಿದ ತುಂಬಾ ಘಟನೆಯನ್ನು ನೋಡಿದಾಗ ಮಕ್ಕಳನ್ನು ಬಿಟ್ಟಿಲ್ಲ ಎಂಬ ಸತ್ಯವನ್ನು ತೋರಿಸುತ್ತದೆ.ಚಿಕ್ಕ ಪ್ರಾಯದಲ್ಲಿಯೇ ಈ ಸಮಸ್ಯೆಯೊಳಗೆ ಬಿದ್ದರೆ ವ್ಯಸನಿಗಳಾಗುವ ಲಕ್ಷಣವು ಹೆಚ್ಚು ಎಂಬುದು ಗಮನಿಸಬೇಕಾದ ಅಂಶ.

ಕೊನೆಯ ಮಾತು

ತಂಬಾಕು ಆದರ ಉತ್ಪನ್ನದ ಪ್ಯಾಕೆಟ್ ಮೇಲೆ ಸೇವೆನೆಯಿಂದ ಆಗುವ ಸಮಸ್ಯೆಯ ಬಗ್ಗೆ ಸಂದೇಶ ಇದ್ದರೂ ಜಾಗೃತಿಗೊಳ್ಳದೆ ಇರುವುದು ದುರಂತವೇ ಸರಿ. ಆದರೂ ಜಾಗೃತಿಯ ಜವಾಬ್ದಾರಿಯನ್ನು ಕೆಳಗೆ ಇಳಿಸುವಂತಿಲ್ಲ. ಪೋಷಕರು ವ್ಯಸನಿಗಳಾದರೆ ಆದರಿಂದ ಹೊರಬರುವುದು ಮಕ್ಕಳು ಅವರ ಸ್ನೇಹಿತ ಬಗ್ಗೆ ವಿಶೇಷವಾದ ಗಮನ,ವ್ಯಸನ ಬಗ್ಗೆ ಕುಟುಂಬ ಜಾಗೃತಿ, ಸಮುದಾಯದಲ್ಲಿ ಸಮುದಾಯ ಸಂಘಟನೆಯಲ್ಲಿ, ಜಾಗೃತಿ ಚಿಕಿತ್ಸೆಗಾಗಿ ಪ್ರೇರಣೆ ಸಂಘ ಸಂಸ್ಥೆ ಶಾಲೆ ಕಾಲೇಜು ಧಾರ್ಮಿಕ ಕೇಂದ್ರ ಹಾಗೂ ಮಾಧ್ಯಮ ಕ್ಷೇತ್ರಗಳು ವೈಜ್ಞಾನಿಕ ಕ್ಷೇತ್ರದ ನೆಲೆಗಟ್ಟಿನಲ್ಲಿ ತಂಬಾಕು ಹಾಗೂ ಉತ್ಪನ್ನಗಳ ದುಷ್ಟರಿಣಾಮದ ಬಗ್ಗೆ ಜಾಗೃತಿಗೊಳಿಸುವ  ವೇಗವನ್ನು ಹೆಚ್ಚಿಸಬೇಕಿದೆ.‌ ಸಮಾಜಿಕ ಜಾಲತಾಣಗಳ ವಿವಿಧ ವೇದಿಕೆಯಲ್ಲಿ  ಪುಟ್ಟ ವಿಡಿಯೋ ಹಾಗೂ ರಿಲ್ಸ್ ಗಳು ಲೇಖನ ಸಾಹಿತ್ಯಗಳು ಕೂಡ ಇಲ್ಲಿ ಜಾಗೃತಿ ಸಂದೇಶಗಳನ್ನು ಬಹಳ ಪರಿಣಾಮಕಾರಿ ನೀಡಬಹುದು. ಕೆಲವು ಸಲಬಿಟ್ರಿಗಳು ಸಮಸ್ಯೆಯ ಸೂಕ್ಷ್ಮತೆಯನ್ನು ಅರಿಬೇಕಿದೆ. ಸರಕಾರಗಳು ಕೂಡ ವ್ಯಸನ ಬಗ್ಗೆ ಗಂಭೀರವಾಗಿ ಪರಿಗಣಿಸುವ ತುರ್ತು ಅವಶ್ಯಕತೆ ಇದೆ.ಕುಟುಂಬ,ಸಮಾಜಗಳು ಸದಾ ಎಚ್ಚರಿಕೆಯಿಂದ ಇರಬೇಕಿದೆ.

ವಿವಿಧ ರೋಗಗಳ ಹಾಗೆಯೇ ತಂಬಾಕು ಅವಲಂಬನೆ ಕೂಡ ಒಂದು ರೀತಿಯ ರೋಗ ಇದಕ್ಕೆ ಚಿಕಿತ್ಸೆಯೂ ಇದೆ, ತಾನಾಗಿಯೇ ಈ ಸಮಸ್ಯೆಯಿಂದ ಹೊರಬರಲು ಕಷ್ಟವಾಗುತ್ತಿದೆ ದೈಹಿಕ ಮಾನಸಿಕವಾದ ಸಮಸ್ಯೆಗಳು ಆಗುತ್ತಿದೆ ಎನಿಸಿದಾಗ ತುರ್ತು ತಾಗಿ  ಸಂಬಂಧಿಸಿದ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಚಿಕಿತ್ಸೆಯನ್ನು ಪಡೆಯಬೇಕು,ಸಮಾಜ ಕೂಡ ಈ ಬಗ್ಗೆ ಕಾಳಜಿ ವಹಿಸಬೇಕು.ಇದಕ್ಕೆ ಬಲವಾದ ಕಾರಣ ಇಂದು  ಹೆಚ್ಚುತ್ತಿರುವ ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆಗಳು ವಿಶೇಷವಾಗಿ ಕ್ಯಾನ್ಸರ್ ನಂತಹ ಮಾರಕ ರೋಗಗಳು. ಯುವ ಜನತೆ ದೇಶ ಭವಿಷ್ಯ, ಯುವ ಸಂಪತ್ತು ಹಾಗೂ ಪರಿಸರ ಜೋಪಾನವಾಗಿರಲು ನಾವೆಲ್ಲರೂ ಕಾಳಜಿ ವಹಿಸೋಣ.

  • ಸುರೇಶ್ ಎಸ್ ನಾವೂರು, ನಾಟಕ ರಚನೆಕಾರರು, ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಸಮುದಾಯ ಕಾರ್ಯನಿರ್ವಾಹಕರು .

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ತಂಬಾಕು ಉತ್ಪನ್ನಗಳ ಮಾರಕ ಪರಿಣಾಮಗಳೇನು? ಯಾಕೆ ನಿಷೇಧಿಸಬೇಕು ಎನ್ನುತ್ತಾರೆ? ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಸಮುದಾಯ ಕಾರ್ಯನಿರ್ವಾಹಕ ಸುರೇಶ್ ನಾವೂರು ಬರೆಯುತ್ತಾರೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*