ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ರಸ್ತೆ ಅಪಘಾತಗಳೂ ಆಗುತ್ತಿವೆ. ಬಂಟ್ವಾಳದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಘಟನೆಯಲ್ಲಿ ಲಾರಿ ಪಲ್ಟಿಯಾಗಿ ಕಾರ್ಮಿಕನೊರ್ವ ಮೃತಪಟ್ಟಿದ್ದಾರೆ. ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸ್ತಾ (32) ಮೃತಪಟ್ಟ ಕಾರ್ಮಿಕ
ಲಾರಿ ಚಾಲಕರಾಗಿರುವ ಸುಜಿತ್, ಕ್ಲೀನರ್ ಸಿ. ಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಅಕ್ಕಿ ಲೋಡ್ ಲಾರಿ ಬಂಟ್ವಾಳದ ಎಸ್‌ವಿ.ಎಸ್.ಕಾಲೇಜು ಬಳಿ ಬರುವ ವೇಳೆ ಅತಿಯಾದ ಮಳೆಗೆ ಚಾಲಕ ನಿಯಂತ್ರಣ ಕಳೆದು ಪಲ್ಟಿಯಾಗಿದೆ ಎಂದು ಪ್ರಾಥಮಿಕ ಮಾಹಿತಿಗಳು ಲಭಿಸಿವೆ. ಉಡುಪಿಯಿಂದ ಅಕ್ಕಿ ಲೋಡ್ ಮಾಡಿಕೊಂಡು ಮೂಡಬಿದಿರೆಯಾಗಿ ಬಂಟ್ವಾಳಕ್ಕೆ ಬರುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಲಾರಿಯ ಹಿಂಭಾಗದಲ್ಲಿ ಅಕ್ಕಿ ಲೋಡ್ ನ ಮೇಲೆ ಕುಳಿತುಕೊಂಡಿದ್ದ ಕಾರ್ಮಿಕ ಲಾರಿಪಲ್ಟಿಯಾದ ಸಂದರ್ಭ, ರಸ್ತೆಗೆ ಎಸೆಯಲ್ಟಟ್ಟು ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಢಿದ್ದಾರೆ.ಒಟ್ಟು ನಾಲ್ಕು ಜನರು ಲಾರಿಯಲ್ಲಿದ್ದರು. ಆದರ್ಶ ಹಾಗೂ ನಿರ್ಮಲ್ ಲಾರಿಯ ಹಿಂಬದಿ ಅಕ್ಕಿ ಲೋಡ್ ಮೇಲೆ ಕುಳಿತುಕೊಂಡಿದ್ದರು. ಆದರ್ಶ ನಿಗೂ ಗಂಭೀರವಾಗಿ ಗಾಯವಾಗಿದ್ದು,ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Be the first to comment on "Bantwala: ಲಾರಿ ಪಲ್ಟಿಯಾಗಿ ಕಾರ್ಮಿಕ ಮೃತ್ಯುವಶ"