ಗಣೇಶ ಪ್ರಸಾದ ಪಾಂಡೇಲು
ಹೆದ್ದಾರಿ ಪ್ರಾಧಿಕಾರ ಮೇ 29ರಿಂದ ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ) ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್ ದ್ವಿ ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂ. 2ರಿಂದ ಕಲ್ಲಡ್ಕ ಫ್ಲೈಓವರ್ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಿದೆ. ಆದರೆ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಮಾಣಿ ವೆಹಿಕಲ್ ಅಂಡರ್ ಪಾಸ್ ಸಂಚಾರಕ್ಕೆ ತೆರೆದುಕೊಂಡು ಅಪಾಯವನ್ನು ಆಹ್ವಾನಿಸಿದಂತಾಗಿದೆ.
ಪಾಣೆಮಂಗಳೂರು ,ಮೇಲ್ಕಾರ್, ಮಾಣಿ, ಉಪ್ಪಿನಂಗಡಿ, ಉಪ್ಪಿನಂಗಡಿ- ಸುಬ್ರಹ್ಮಣ್ಯ ಕ್ರಾಸ್, ನೆಕ್ಕಿಲಾಡಿಗಳಲ್ಲಿ ಏಕಕಾಲಕ್ಕೆ ಅಂಡರ್ ಪಾಸ್ ಕಾಮಗಾರಿ ಆರಂಭಗೊಂಡಿದ್ದವು ಪಾಣೆಮಂಗಳೂರು ಮತ್ತು ಮೆಲ್ಕಾರ್ ಅಂಡರ್ ಪಾಸ್ ಈಗಾಗಲೇ ಸಂಚಾರಕ್ಕೆ ಮುಕ್ತಗೊಂಡಿವೆ. ಮಾಣಿ ಮತ್ತು ಉಪ್ಪಿನಂಗಡಿ ಅಂಡರ್ ಪಾಸ್ ಮೇ 29ರಂದು ಸಂಚಾರಕ್ಕೆ ತೆರೆದುಕೊಂಡಿವೆ.ಆದರೆ ಈಗಾಗಲೇ ಸಂಚಾರಕ್ಕೆ ತೆರೆದುಕೊಂಡ ಪಾಣೆಮಂಗಳೂರು ಮತ್ತು ಮೆಲ್ಕಾರ್ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಂಡಿವೆಯಾದರೂ ಮಾಣಿ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಂಡಿಲ್ಲ ಬದಿಯ ತಡೆಗೋಡೆ ಒಂದಷ್ಟು ಬಾಕಿ ಇವೆ. ಸೂರಿಕುಮೇರು ಪೆಟ್ರೋಲ್ ಬಂಕ್ ಸಮೀಪದ ಕಿರುಸೇತುವೆ ದಾಟಿದ ಬಳಿಕ ಹಳೀರದಲ್ಲಿ ಮಾಣಿ ಅಂಡರ್ ಪಾಸ್ ಆರಂಭಗೊಂಡು ಮಾಣಿಯ ತನಕ ರಸ್ತೆ ಲೆವೆಲ್ ಆಗಿದ್ದರೂ ನಂತರ ಮುಗಿಯುವ ತನಕ ಇಳಿಜಾರು ಇದೆ. ಆ ಕಡೆ ಈ ಕಡೆ ತಡೆಗೋಡೆ ಅಪೂರ್ಣ ಆಗುವ ತನಕವೂ ಅಪಾಯ ಕಟ್ಟಿಟ್ಟ ಬುತ್ತಿ. ಕಿರುಸೇತುವೆ ಕಾಮಗಾರಿ ಯೂ ಆಗೆದು ಹಾಕಿ ಅಲ್ಲಿ ಕೆಸರು ಮತ್ತು ರಸ್ತೆ ದಾಟುವ ಏಕಮುಖ ವ್ಯವಸ್ಥೆ ಅತ್ಯಂತ ಅಪಾಯಕಾರಿ ಆಗಿದೆ. ಪಾದಚಾರಿಗಳಿಗೆ ಇಲ್ಲಿ ವ್ಯವಸ್ಥೆಯೇ ಇಲ್ಲ
ಸರ್ವೀಸ್ ರಸ್ತೆ ಬಳಕೆಗೂ ಎಚ್ವರಬೇಕು
ಸರ್ವಿಸ್ ರೋಡ್ ಉಪಯೋಗಿಸುವ ಮುನ್ನ ಎಚ್ಚರಿಕೆ ವಹಿಸಬೇಕು ಮಂಗಳೂರಿನಿಂದ ಪುತ್ತೂರು ಕಡೆಗೆ ಹೋಗುವಾಗ ಅಂಡರಪಾಸ್ ಬಳಿ ಬಲಕ್ಕೆ ತಿರುವು ತೆಗೆದುಕೊಳ್ಳುವಾಗ ಚಾಲನೆ ಮಾಡುವವರ ದೃಷ್ಟಿ ಅಂಡರಪಾಸ್ ಒಳಗೆ ಆಯಾ ಕಡೆಯಿಂದ ಬರುವ ವಾಹನಗಳಿಗೆ ಪಾದಚಾರಿಗಳಿಗೆ ಕಾಣಿಸುವುದಿಲ್ಲ ಎರಡು ವಾಹನಗಳು ಡಿಕ್ಕಿ ಹೊಡೆಯುವ ಅಥವಾ ಪಾದಚಾರಿಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚು ಈ ಬಗ್ಗೆ ಸ್ವಲ್ಲ ಎಚ್ಚರ ತಪ್ಪಿದರೂ ಅನಾಹುತ ತಪ್ಪದು. ಮೇಲಾಗಿ ಅದು ಸರ್ವಿಸ್ ರಿಕ್ಷಾಗಳ ಪಾರ್ಕಿಂಗ್ ಸ್ಪಾಟ್ ಕೂಡ ಹೌದು.ಎಡಬದಿಯ ಸರ್ವೀಸ್ ರಸ್ತೆಯೇ ಪ್ರಸ್ತುತ ಮುಖ್ಯರಸ್ತೆಯಾಗಿದ್ದು, ಚರಂಡಿಯೂ ಇಲ್ಲದೇ ದುರಸ್ತಿಯೂ ಇಲ್ಲದೇ ಹೊಂಡಗುಂಡಿಯೂ ಇರುವ ಕಾರಣ ಅತ್ಯಂತ ಅಪಾಯಕಾರಿ ಆಗಿದೆ
ತ್ವರಿತವಾಗಿ ಪೂರ್ಣಗೊಳ್ಳಿ
ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದು. ಕಾಮಗಾರಿ ತ್ವರಿತವಾಗಿ ಮುಗಿಸುವ ಉದ್ದೇಶ ಹೆದ್ದಾರಿ ಪ್ರಾಧಿಕಾರಕ್ಕೆ ,ಎಂಜಿನಿಯರ್ ಗಳಿಗೆ ಗುತ್ತಿಗೆದಾರರಿಗೆ ಬೇಕು. ಆ ವರೆಗೆ ತಾಳ್ಮೆ ಮತ್ತು ಸಮಾಧಾನದ ಚಿತ್ತ ಅಂಡರ್ ಪಾಸ್ ನಲ್ಲಿ ಸಂಚರಿಸುವವರಿಗೂ ಬೇಕು
ಹೇಗೂ ತಡ ಆಗಿದೆ. ಇನ್ನೂ ಮೂರು ಅಥವಾ ನಾಲ್ಕು ವಾರ ಬಿಟ್ಟು ಅಂಡರ್ ಪಾಸ್ ಮುಕ್ತ ಗೊಳಿಸಿದರೆ ಸಾಕಿತ್ತು. ಸಂಪರ್ಕ ರಸ್ತೆಗಳ ಬಗ್ಗೆಯೂ ಸಂಬಂಧಪಟ್ಟವರ ಗಮನವಿರಲಿ ಎಂದು ನಿವೃತ್ತ ಗ್ರಂಥಪಾಲಕ ಕೂಸಪ್ಪ ನಾಯ್ಕ ಹಳೀರ ಹೇಳಿದ್ದಾರೆ.
ಹಳೀರದಿಂದ ಎಡಬದಿಯ ಸಂಪರ್ಕ ರಸ್ತೆ ಚೆನ್ನಾಗಿ ನಿರ್ಮಿಸಿದರೂ ಫುಟ್ಬಾತ್ ಅನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಬಲಬದಿಯ ಸಂಪರ್ಕ ಪ್ರಸ್ತುತ ಮುಖ್ಯ ರಸ್ತೆಯಾಗಿದ್ದು ಅದು ಅವ್ಯವಸ್ಥೆಯ ಆಗರ.ಅಲ್ಲಿ ಚರಂಡಿ ಆಗಲಿ ಫುಟ್ಪಾತ್ ಆಗಲಿ ಹೊಂಡಗುಂಡಿಯ ಸರಿಪಡಿಸುವಿಕೆ ಯಾವುದೂ ಆಗಿಲ್ಲ.ಚಾಲಕರಿಗೆ ಪ್ರಯಾಣಿಕರಿಗೆ ಪಾದಚಾರಿಗಳ ಸಹಿತ ಎಲ್ಲರಿಗೂ ಶಿಕ್ಷೆ ಎಂದು ಖಾಸಗಿ ಬಸ್ ಚಾಲಕ ಕೃಷ್ಣ ಕುಮಾರ್ ಬುಡೋಳಿ ಆಭಿಪ್ರಾಯಪಡುತ್ತಾರೆ.
Be the first to comment on "ಸಂಚಾರಕ್ಕೆ ತೆರೆದುಕೊಂಡ ಮಾಣಿ ಅಂಡರ್ ಪಾಸ್ (ವಿಯುಪಿ) — ಸಮಸ್ಯೆಗಳು ಇನ್ನೂ ಹಾಗೇ ಉಳಿದಿವೆ"