ಬಂಟ್ವಾಳ: ಮಂಗಳೂರು ಹಾಗೂ ಬಿ.ಸಿ.ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ಮೈಟ್ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಸ್ತುತಿಯ ಕಲಾವೈಭವ ಬಿ.ಸಿ.ರೋಡಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸಮಾರಂಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಯಕ್ಷಗಾನದ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹಾಗೂ ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ ಅವರಿಗೆ ಗೌರವ ಸನ್ಮಾನ ನೀಡಲಾಯಿತು.
ರಂಗಕರ್ಮಿ, ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ಮಾತನಾಡಿ, ಮಕ್ಕಳನ್ನು ಬಾಲ್ಯದಲ್ಲಿಯೇ ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮುಂದೆ ಅವರ ಆ ಕ್ಷೇತ್ರದಲ್ಲಿ ಸಾಧನೆ ಮಾಡುವ ಜತೆಗೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ ಎಂದರು.
ಪುತ್ತೂರಿನ ಬಿಲ್ಡರ್ ಅಬ್ದುಲ್ ರೆಹಮಾನ್ ಮಾತನಾಡಿ, ವಿದ್ಯಾರ್ಥಿಗಳು ಒಂದೇ ತಾಯಿಯ ಮಕ್ಕಳ ರೀತಿ ಕಲಿತು ತಮ್ಮ ಸಾಧನೆಯ ಮೂಲಕ ವಿದ್ಯಾಸಂಸ್ಥೆ, ಹೆತ್ತವರಿಗೆ ಕೀರ್ತಿ ತರುವ ಜತೆಗೆ ದೇಶದ ಆಸ್ತಿಯಾಗಬೇಕಿದೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ರಾಕೇಶ್ಕುಮಾರ್ ಸಂಸ್ಥೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರಂಗನಟ ಪ್ರಿತೇಶ್ಕುಮಾರ್, ಉಪಪ್ರಾಂಶುಪಾಲೆ ನಿಶ್ಮಿತಾ ರಾಕೇಶ್, ವಿಭಾಗ ಮುಖ್ಯಸ್ಥರಾದ ಮೊಮ್ಮಹದ್ ಆಶ್ರಫ್, ಐಶ್ವರ್ಯ ಪ್ರಸಾದ್, ವಿದ್ಯಾರ್ಥಿ ನಾಯಕರಾದ ಮಿಥುನ್, ಸಾಂಸ್ಕೃತಿಕ ಕಾರ್ಯದರ್ಶಿ ಬಾಯಿಝ್ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ನಿಶ್ಮಿತಾ ಸ್ವಾಗತಿಸಿದರು. ಗೀತಾ ವಂದಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಕಲಾವೈಭವ: ಹಾಜಬ್ಬ, ಗೋವಿಂದ ಭಟ್, ಸತೀಶ್ ಇರಾ ಅವರಿಗೆ ಸನ್ಮಾನ"