ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿಗೆ ಸ್ವಚ್ಛ ವಾಹಿನಿಗೆ ಶನಿವಾರ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಸ್ವತಃ ಮನೆ, ಅಂಗಡಿ, ಮಳಿಗೆಗಳ ಕಸ ಸಂಗ್ರಹಕ್ಕಿಳಿದು ಮಾದರಿಯಾದರು.
ಗ್ರಾಮ ಪಂಚಾಯತ್ ನಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡಲು ಸ್ವಚ್ಚ ವಾಹಿನಿ ಒದಗಿಸಲಾಗಿದ್ದು, ಅಧ್ಯಕ್ಷ ಸಂತೋಷ ಕುಮಾರ್ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಮನೆಯ ಒಣಕಸವನ್ನು ಸ್ವಚ್ಚ ವಾಹಿನಿಗೆ ನೀಡಿ ನರಿಕೊಂಬು ಗ್ರಾಮ ಪಂಚಾಯತ್ ಅನ್ನು ಸ್ವಚ್ಚ ಗ್ರಾಮ ಮಾಡಲು ಸಹಕರಿಸಬೇಕಾಗಿ ಕೋರಿದರು

https://www.opticworld.net/
ಗ್ರಾಮದ ಪ್ರಮುಖ ಬೀದಿಗಳ ಮನೆ ಹಾಗು ಅಂಗಡಿಗಳ ಒಣಕಸವನ್ನು ಸ್ವತಃ ಸಂಗ್ರಹಿಸುವ ಮೂಲಕ ಇತರರಿಗೆ ಮಾದರಿಯಾದರು, ಸಂಗ್ರಹಿಸಿದ ಒಣ ಕಸವನ್ನು ಶಂಭೂರು ಗ್ರಾಮದಲ್ಲಿರುವ ಎಂಆರ್ ಎಫ್ ಘಟಕಕ್ಕೆ ನೀಡಲಾಯಿತು ಈ ಸಂದರ್ಭ ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಧ್ಯಕ್ಷ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ನಿರ್ದೇಶಕರಾದ ಶ್ರೀಷ ರಾಯಸ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ರವಿ ಅಂಚನ್ ಅರುಣ್ ಕುಮಾರ್ ಬೋರುಗುಡ್ಡೆ, ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ, ಗ್ರಾಮಸಹಾಯಕ ಲಕ್ಷ್ಮಣ್ ನಾಯ್ಕ, ಸ್ವಚ್ಛ ವಾಹಿನಿಯ ಚಾಲಕ ಡೋಗ್ರ ಗಾಣಿಗ ಕರ್ಬೆಟ್ಟು ಮುಂತಾದವರು ಹಾಜರಿದ್ದರು,
Be the first to comment on "ನರಿಕೊಂಬು: ಸ್ವಚ್ಛ ವಾಹಿನಿಗೆ ಚಾಲನೆ, ಸ್ವತಃ ಕಸ ಸಂಗ್ರಹಿಸಿ ಮಾದರಿಯಾದ ಅಧ್ಯಕ್ಷ ಸಂತೋಷ್ ಕುಮಾರ್"