ಬಿ.ಸಿ.ರೋಡಿನ ವಿವೇಕನಗರದ ಶಕ್ತಿ ಕಂಪೌಂಡ್ ನ ಒಂದನೇ ಮಹಡಿಯಲ್ಲಿ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋಅಪರೇಟಿವ್ ಸೊಸೈಟಿ ಗುರುವಾರ ಶುಭಾರಂಭಗೊಂಡಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ವೆಂಕಟರಮಣ ಆಸ್ಪಣ್ಣ ದೀಪಪ್ರಜ್ವಲನಗೊಳಿಸಿ ಆಶೀರ್ವಚನ ನೀಡಿ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿ ವ್ಯವಹಾರವನ್ನು ನಡೆಸಿದರೆ ಯಶಸ್ಸು ಸಾಧ್ಯ ಎಂದು ಶುಭ ಹಾರೈಸಿದರು.
ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ಶುಭ ಹಾರೈಸಿದರು. ರಾಜ್ಯ ಸೌಹಾರ್ದ ಸಂಯಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ. ಭಟ್ ಮಾತನಾಡಿ, ಮಹಿಳೆಯೊಬ್ಬರು ಸೊಸೈಟಿ ಅಧ್ಯಕ್ಷೆಯಾಗಿರುವುದು ಸಂತಸದ ವಿಷಯ, ಸಹಕಾರ ಮನೋಭಾವನೆಯಿಂದ ಮುನ್ನಡೆಯಿರಿ ಎಂದು ಸಲಹೆ ನೀಡಿದರು.

https://www.opticworld.net/
ಭದ್ರತಾ ಕೊಠಡಿಯನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಮೈಸೂರು ಪ್ರಾಂತ ಅಧಿಕಾರಿ ಗುರುಪ್ರಸಾದ್ ಬಂಗೇರ ಉದ್ಘಾಟಿಸಿ ಸಹಕಾರ ಕ್ಷೇತ್ರದಲ್ಲಿ ಅನುಭವ ಹೊಂದಿದವರು ಮಾಡಿರುವ ಸಹಕಾರ ಸಂಸ್ಥೆ ಯಶಸ್ವಿಯಾಗಲಿ ಎಂದರು.
ಸಹಕಾರಿ ನಾಮಫಲಕವನ್ನು ಪುತ್ತೂರು ಮಾಜಿ ಪುರಸಭಾಧ್ಯಕ್ಷ ಜೀವಂಧರ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು. ನಗದು ಕೌಂಟರ್ ಅನ್ನು ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಕುಲಾಲ್ ಉದ್ಘಾಟಿಸಿದರು,, ಗಣಕಯಂತ್ರವನ್ನು ದ.ಕ.ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಉದ್ಘಾಟಿಸಿದರು. ನಗದು ಪತ್ರವನ್ನು ವಕೀಲರು, ನೋಟರಿ ಅಶ್ವನಿ ಕುಮಾರ್ ರೈ ಬಿಡುಗಡೆಗೊಳಿಸಿ ಮಾತನಾಡಿ, ಬಿ.ಸಿ.ರೋಡ್ ನಲ್ಲಿ ಸಹಕಾರ ಸಂಸ್ಥೆಗೆ ವಿಫುಲ ಅವಕಾಶವಿದ್ದು, ಎಲ್ಲ ವರ್ಗದವರಿಗೂ ಪ್ರಾತಿನಿಧ್ಯ ನೀಡಿ, ಆರ್ಥಿಕ ಶಿಸ್ತು, ಪಾರದರ್ಶಕತೆಯನ್ನು ಪಾಲಿಸಿ ಎಂದು ಕಿವಿಮಾತು ಹೇಳಿದರು.
ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ರಕ್ತೇಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಸಜಿಪಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್ ಭಾಗವಹಿಸಿ ಶುಭ ಹಾರೈಸಿದರು. ಸೊಸೈಟಿ ಅಧ್ಯಕ್ಷೆ ರೋಹಿಣಿ ಉದಯ್ ಅಧ್ಯಕ್ಷತೆ ವಹಿಸಿ ಎಲ್ಲರ ಸಹಕಾರ ಕೋರಿದರು. ಸಿಇಒ ಉದಯ ವೆಂಕಟೇಶ ಭಟ್ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷರಾದ ಅವಿನಾಶ್ ಕಾಮತ್, ನಿರ್ದೇಶಕರಾದ ಜಯಲಕ್ಷ್ಮೀ, ಜಯಾನಂದ ಆಚಾರ್ಯ, ಅನಿತಾ ನಾಯಕ್, ಬಿಂದು ಕುಡ್ವ, ಪ್ರಜ್ವಲ್ ಪ್ರಸಾದ್ ಕೆ, ಶ್ರದ್ಧಾ, ದಿವ್ಯಾ, ಪರಮೇಶ್ವರ ಮೊಯ್ಲಿ, ಹರಿಣಾಕ್ಷಿ ವಿಜೆ ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋಅಪರೇಟಿವ್ ಸೊಸೈಟಿ ಉದ್ಘಾಟನೆ"