
https://www.opticworld.net/
ಬಂಟ್ವಾಳ: ಆರಾಧನಾ ಫ್ರೆಂಡ್ಸ್ ಸರ್ಕಲ್ ಬೈಪಾಸ್ ವತಿಯಿಂದ ಯಕ್ಷಗಾನ ಬಯಲಾಟ ಮತ್ತು ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿ ಯಕ್ಷಗಾನ ಬಯಲಾಟ ನಡೆಯಿತು.
37ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪರಿಸರಪ್ರೇಮಿ ಏ.ದಾಮೋದರ ಸಂಚಯಗಿರಿ ಅವರಿಗೆ ದಿ.ಲಕ್ಷ್ಮಮ್ಮ ಮತ್ತು ಕೆ.ಮರಿಯಪ್ಪಯ್ಯ ಹೊಳ್ಳ ಸ್ಮರಣಾರ್ಥ ಆರಾಧನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭ ಎಸ್ಸೆಸ್ಸೆಲ್ಸಿ ಸಾಧಕ ಅವಳಿಗಳಾದ ಪ್ರಾರ್ಥನಾ ಮಲ್ಯ ಮತ್ತು ಪ್ರಣವ್ ಮಲ್ಯ ಅವರನ್ನು ಗೌರವಿಸಲಾಯಿತು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಸಮಿತಿಯ ಸದಸ್ಯರಾದ ನರೇಶ್ ಹೊಳ್ಳ ಕಳ್ಳಿಮಾರ್, ಸುರೇಶ್ ಹೊಳ್ಳ, ಸುಧಾಕರ ಹೊಳ್ಳ ಕಳ್ಳಿಮಾರ್, ಬಿ.ಗಣಪತಿ ಸೋಮಯಾಜಿ, ಶಂಕರನಾರಾಯಣ ಐತಾಳ್, ರಾಮಚಂದ್ರ ಮಯ್ಯ, ಗಣೇಶ್ ಪೂಂಜರಕೋಡಿ, ಪ್ರಕಾಶ ಪೂಂಜರಕೋಡಿ, ಯೋಗೀಶ್ ಪೂಂಜರಕೋಡಿ, ಸಂಜೀವ ಕೊಟ್ಟಾರಿ ಉಪಸ್ಥಿತರಿದ್ದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳ: ಯಕ್ಷಗಾನ, ಆರಾಧನಾ ಪ್ರಶಸ್ತಿ ಪ್ರದಾನ"