ಬಂಟ್ವಾಳ: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಒಂದು ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ವ್ಯಕ್ತಿಗೆ ತೀವ್ರ ಗಾಯಗಳುಂಟಾಗಿವೆ. ಬಿ.ಸಿ.ರೋಡಿನ ಸರ್ಕಲ್ ಬಳಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಕೇರಳ ಮೂಲದ ವಿಶ್ವನಾಥ್ ಶೆಟ್ಟಿ ಎಂಬವರು ಗಾಯಗೊಂಡವರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿ.ಸಿ.ರೋಡಿನ ಸರ್ಕಲ್ ಮತ್ತಷ್ಟು ಅಗಲವಾಗಿದ್ದು, ರಸ್ತೆ ಕಿರಿದಾಗಿದೆ. ಅಲ್ಲದೆ, ಬಸ್ಸುಗಳು ವೇಗವಾಗಿ ಸಂಚರಿಸುವ ಹಿನ್ನೆಲೆಯಲ್ಲಿ ಸಣ್ಣ ವಾಹನಗಳ ಚಾಲಕರು ಸಮಸ್ಯೆ ಅನುಭವಿಸಬೇಕಾಗುತ್ತಿದೆ.
ಬಿ.ಸಿ.ರೋಡ್ ನಿಂದ ಮೆಲ್ಕಾರ್ ಕಡೆಗೆ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಿದ್ದ ವಿಶ್ವನಾಥ ಅವರಿಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಖಾಸಗಿ ಸಿಸಿ ಬಸ್ ಡಿಕ್ಕಿ ಹೊಡೆದಿದೆ.. ಬಿಸಿರೋಡಿನಿಂದ ಮೆಲ್ಕಾರ್ ಕಡೆಗೆ ಹೋಗುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾಗಿ ಹೇಳಲಾಗಿದ್ದು, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲೀಗ ಪ್ರಕರಣ ದಾಖಲಾಗಿದೆ.
Be the first to comment on "ACCIDENT NEWS: ಬಿ.ಸಿ.ರೋಡ್ ಸರ್ಕಲ್ ನಲ್ಲಿ ಕಾರಿಗೆ ಖಾಸಗಿ ಬಸ್ ಡಿಕ್ಕಿ"