
https://www.opticworld.net/

BANTWAL MUNCIPALITY
ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಆಸ್ತಿಗಳ ಲಭ್ಯ ಮಾಹಿತಿಯನ್ನು ಜಾಲತಾಣ: http://aasthikanaja.karnatakasmartcity.in/kmf24 ರಲ್ಲಿ ಪ್ರಚುರಪಡಿಸಿರುತ್ತಾರೆ. ಈ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಸ್ವತ್ತಿನ ಮಾಹಿತಿಯು ಸರಿಯಾಗಿರುವ ಕುರಿತು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಚುರಪಡಿಸಲಾದ ಸ್ವತ್ತಿನ ಮಾಹಿತಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ಅಗತ್ಯ ದಾಖಲೆಗಳನ್ನು ಬಂಟ್ವಾಳ ಪುರಸಭೆಯ ಕಂದಾಯ ವಿಭಾಗಕ್ಕೆ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಎಂದು ಪುರಸಭೆ ಪ್ರಕಟಣೆ ತಿಳಿಸಿದೆ.
ಅನಧಿಕೃತ ಸ್ವತ್ತುಗಳ ಮಾಲೀಕರ ಗಮನಕ್ಕೆ:
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿನ ಅನಧಿಕೃ ತ ಸ್ವತ್ತುಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿರುತ್ತದೆ. ಇದರಿಂದ ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಸ್ವತ್ತಿನ ಕಂದಾಯವನ್ನು ಪಾವತಿಸಿ ಇ-ಖಾತಾ ಪಡೆಯಬಹುದಾಗಿದೆ. ಸ್ವತ್ತಿನ ಮಾಲೀಕರು ಬಂಟ್ವಾಳ ಪುರಸಭೆಗೆ ಭೇಟಿ ನೀಡಿ, ದಾಖಲೆಗಳನ್ನು ಸಲ್ಲಿಸಿ 7 ದಿನಗಳ ಒಳಾಗಾಗಿ ಇ-ಖಾತಾ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಬಂಟ್ವಾಳ ಪುರಸಭೆಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಸ್ವತಃ ಭೇಟಿ ನೀಡಿ ಸಹಾಯವಾಣಿ ಸಂಖ್ಯೆ 08255-233130 ವಾಟ್ಸಾಪ್ ಸಂಖ್ಯೆ 7899978933ಗೆ ವಾಟ್ಸಾಪ್ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಪುರಸಭಾ ಪ್ರಕಟಣೆ ತಿಳಿಸಿದೆ. ಸ್ವತ್ತಿನ ಮಾಲಕರು ಕಡ್ಡಾಯವಾಗಿ ಹಾಜರುಪಡಿಸಬೇಕಾದ ದಾಖಲೆಗಳು
- ಮಾಲಕರ ವೋಟರ್ ಐಡಿ ಅಥವಾ ಪಾನ್ ಕಾರ್ಡ್
- ಕಟ್ಟಡ ಮತ್ತು ಖಾಲಿ ನಿವೇಶನದ ಭಾವಚಿತ್ರ
- ಮಾಲಕರ ಭಾವಚಿತ್ರ
- ದಸ್ತಾವೇಜು ಪ್ರತಿ (ನೋಟರಿ ದೃಢೀಕೃತ)
- ಭೂಪರಿವರ್ತನೆ ಆದೇಶದ ಪ್ರತಿ (ನೋಟರಿ ದೃಢೀಕೃತ)
- ಸರ್ವೆ ನಕ್ಷೆ
- ಪಹಣಿಪತ್ರ
- ತೆರಿಗೆ ಪಾವತಿ ಪ್ರತಿ (ಪ್ರಸಕ್ತ ವರ್ಷದ)
- ಯೋಜನಾ ಪ್ರಾಧಿಕಾರ ಹಾಗೂ ಪುರಸಭಾ (ಏಕವಿನ್ಯಾಸ) ಆದೇಶ ಮತ್ತು ನಕ್ಷೆ
- ವಿದ್ಯುತ್ ಮತ್ತು ನೀರಿನ ಬಿಲ್ಲಿನ ಪಾವತಿ ರಶೀದಿ
Be the first to comment on "BANTWAL: ಬಂಟ್ವಾಳ ಪುರಸಭೆ ಆಸ್ತಿಗಳ ಮಾಹಿತಿ ಜಾಲತಾಣದಲ್ಲಿ ಲಭ್ಯ: ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಲು ಅವಕಾಶ : Details"