
https://www.opticworld.net/

ಶ್ರೀಗಳು ಆಶೀರ್ವಚನ ನೀಡಿದರು.
ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಭಾನುವಾರ ಶ್ರೀದೇವರ ಪ್ರತಿಷ್ಠಾ ಬ್ರಹ್ಮಕಲಶದ 12ನೇ ವರ್ಧಂತ್ಯುತ್ಸವ ನಡೆಯಿತು. ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದ ಶ್ರೀ ವಿದ್ಯೇಂದ್ರ ಶ್ರೀಪಾದರು ಆಶೀರ್ವಚನ ನೀಡಿ, ನಮ್ಮ ಉದ್ಧಾರಕ್ಕಾಗಿ ದೇವರು ನೆಲೆ ನಿಂತಿದ್ದಾರೆ ಎಂಬ ನೆನಪಿಗೆ ವರ್ಧಂತ್ಯುತ್ಸವ ಮಾಡಲಾಗುತ್ತದೆ. ನಮ್ಮ ಹಳೆಯ ಸಂಪ್ರದಾಯವನ್ನು ಮರೆಯಬಾರದು. ಕಷ್ಟದಲ್ಲಿರುವವರ ಸೇವೆಯೇ ದೇವರಿಗೆ ಸಲ್ಲಿಸುವ ದೊಡ್ಡ ಟ್ಯಾಕ್ಸ್. ಭಗವಂತ ಸಂಪ್ರೀತನಾಗಲು ಆರ್ತರಿಗೆ ನೆರವಾಗುವುದು ಮುಖ್ಯ ಎಂದರು.
ಅಧ್ಯಕ್ಷತೆಯನ್ನು ಹವ್ಯಕ ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ ವಹಿಸಿ ಮಾತನಾಡಿ, ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕ್ಷೇತ್ರ ಹಾಗೂ ಸಮಾಜ ಪ್ರಗತಿ ಹಾದಿಯಲ್ಲಿದೆ ಎಂದರು.
ನಿವೃತ್ತ ಪ್ರಿನ್ಸಿಪಾಲ್ ಡಾ.ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿ, ಕಲ್ಲಡ್ಕ ಉಮಾಶಿವ ಕ್ಷೇತ್ರ ವಿಶಿಷ್ಟವಾಗಿದ್ದು, ಭಕ್ತರ ಆರಾಧ್ಯ ಸನ್ನಿಧಿಯಾಗಿದೆ. ದೇವಸ್ಥಾನದಲ್ಲಿ ಸಣ್ಣದು, ದೊಡ್ಡದು ಎಂದೇನಿಲ್ಲ ದೇವನು ದೊಡ್ಡವನು, ದೇವರ ಸ್ಥಾನ ಪ್ರಾಚೀನವಾಗಿರಲೀ, ಹೊಸದೇ ಇರಲಿ, ದೇವರ ಸ್ಥಾನ ಅತ್ಯುನ್ನತವಾಗಿದೆ. ದೇವಸ್ಥಾನಗಳು ಆಗಾಗ ನವೀಕರಣ ಹೊಂದುತ್ತಾ, ಶ್ರದ್ಧಾಕೇಂದ್ರವಾಗಿ ದೊಡ್ಡದಾಗುತ್ತದೆ. ನಾವು ಉನ್ನತ ಸ್ಥಿತಿಗೆ ಹೋದರೂ ವಿನಯವನ್ನು ಮರೆಯಬಾರದು ಎಂದು ಹೇಳಿದರು. ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಉದ್ಯಮಿ ಕೆ.ಎನ್.ಶಂಕರ ಹಾಲ್ತೋಟ ಉಪಸ್ಥಿತರಿದ್ದರು.
ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಕಾರ್ಯದರ್ಶಿ ಪಿ.ಶ್ಯಾಮ ಭಟ್, ಹವ್ಯಕ ಮಂಡಲ ಕಲ್ಲಡ್ಕ ವಲಯಾಧ್ಯಕ್ಷ ಎಂ.ರಮೇಶ ಭಟ್ಟ ಮಾವೆ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಜನಾರ್ದನ ಅಮೈ ವಂದಿಸಿದರು. ಮುರಳೀಕೃಷ್ಣ ಕುಕ್ಕಿಲ ಕಾರ್ಯಕ್ರಮ ನಿರ್ವಹಿಸಿದರು. ಬೆಳಗ್ಗೆ ಪುಣ್ಯಾಹವಾಚನ, ಗಣಪತಿ ಹವನ, ನವಕ ಪ್ರತಿಷ್ಠೆ, ಶತರುದ್ರ ಜಪ, ನಾಗ, ರಕ್ತೇಶ್ವರಿ, ಗುಳಿಗ ತಂಬಿಲ, ಸಾಮೂಹಿಕ ಕುಂಕುಮಾರ್ಚನೆ, ನವಕ ಕಲಶಾಭಿಷೇಕ ನಡೆಯಿತು.
Be the first to comment on "ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ: ಪ್ರತಿಷ್ಠಾ ವರ್ಧಂತ್ಯುತ್ಸವ"