
PHOTO: ಬಸ್ತಿ ಮಾಧವ ಶೆಣೈ

https://www.opticworld.net/

PHOTOS: BASTHI MADHAVA SHENOY

ಚಿತ್ರಗಳ ಕೃಪೆ: ಬಸ್ತಿ ಮಾಧವ ಶೆಣೈ
ನರಿಕೊಂಬು ಗ್ರಾಮದ ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಫೆ.2ರಂದು ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಜೆ ಶ್ರೀಗಳು ಆಗಮಿಸಿ ಆಶೀರ್ವಚನ ನೀಡಿದರು. ಫೆ.3ರ ಸೋಮವಾರ ಶ್ರೀಗಳ ಉಪಸ್ಥಿತಿಯಲ್ಲಿ ಸೇವಾದಾರರಾದ ಪಿ.ರಘುವೀರ ಭಂಡಾರ್ಕಾರ್ ಮತ್ತು ಮಕ್ಕಳಿಂದ ನೂತನ ರಥ ಸಮರ್ಪಣೆ ನಡೆಯಿತು. ಮಂಗಳವಾರ ರಥಸಪ್ತಮಿಯನ್ನು ನಾನಾ ಕಾರ್ಯಕ್ರಮಗಳು ನಡೆದವು. ಬುಧವಾರ ಮೃಗಬೇಟೆ ಕಾರ್ಯಕ್ರಮ ನಡೆದು, ಗುರುವಾರ ರಥೋತ್ಸವ ನಡೆಯಿತು. ಭಾನುವಾರದವರೆಗೆ ಕಾರ್ಯಕ್ರಮ ನಡೆಯಲಿದೆ. ಹಿರಿಯರಾದ ವೇ.ಮೂ. ಮೊಗರ್ನಾಡು ಜನಾರ್ದನ ಭಟ್, ಆನುವಂಶಿಕ ಮೊಕ್ತೇಸರ ಮೊಗರ್ನಾಡು ವಾಮನ ವೆಂಕಟೇಶ ಭಟ್ ಸಹಿತ ಪ್ರಮುಖರು ಉಪಸ್ಥಿತರಿದ್ದರು
Be the first to comment on "ಪಾಣೆಮಂಗಳೂರು ಸಮೀಪ ಮೊಗರ್ನಾಡು ದೇವಸ್ಥಾನದಲ್ಲಿ ರಥೋತ್ಸವ — ಚಿತ್ರಸುದ್ದಿ"