ವಿಟ್ಲ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಜ.30ರಂದು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ವಿಟ್ಲ ಪೇಟೆಯ ನಿತ್ಯದ ಟ್ರಾಪಿಕ್ ಕಿರಿಕಿರಿ ತಪ್ಪಿಸಲು ಸದಸ್ಯರು ಒತ್ತಾಯಿಸಿದರು. ವಿಟ್ಲ ಪೇಟೆಯಲ್ಲಿ ನಿತ್ಯವೂ ಟ್ರಾಫಿಕ್ ಸಮಸ್ಯೆ. ಇದರಿಂದ ಜನರು ಹೈರಾಣಾಗಿದ್ದಾರೆ ಈ ಕಿರಿಕಿರಿ ತಪ್ಪಿಸಿ ಎಂದು ವಿಪಕ್ಷ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಆಗ್ರಹಿಸಿದರು. ಪ್ರತಿಪಕ್ದ ನಾಯಕ ವಿಕೆಎಂ ಆಶ್ರಫ್ ಆಡಳಿತ ಪಕ್ಷದ ಸದಸ್ಯರಾದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ಜಯಂತ್ ಹರೀಶ್, ಅಶೋಕ್ ರೈ ಮತ್ತಿತರರು ವಿವಿಧ ವಿಷಯಗಳ ಕುರಿತು ಮಾತನಾಡಿದರು.
ವಿದ್ಯುತ್ ಪೂರೈಕೆ ಸಮಸ್ಯೆ ನೀರಿನ ಟ್ಯಾಂಕ್ ಸ್ವಚ್ಚತೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಿತು. ಹಿಂದಿನ ಸಭೆಗಳ ನಿರ್ಣಯಗಳ ಅನುಷ್ಠಾನ ದ ಬಗ್ಗೆ ಚರ್ಚಿಸಲಾಯಿತು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕರುಣಾಕರ ವಿ.ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, :ಗ್ರಾಮ ಕರಣಿಕ ಅಜಿತ್, ಅರಣ್ಯಾಧಿಕಾರಿ ವೀರಣ್ಣ, ಮೆಸ್ಕಾಂ ಜೆಇ ನವೀನ್ ಕುಮಾರ್, ಪೊಲೀಸ್ ಇಲಾಖೆಯ ರತನ್ ಕುಮಾರ್, ಬಿ. ಎಸ್.ನಾಯಕ್, ಎಂಜಿನಿಯರ್ ಲೋಕೇಶ್ , ವಿಟ್ಲ ಪಟ್ಟಣ ಪಂಚಾಯಿತಿ ಹೆಚ್ಚುವರಿ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡ, ಸದಸ್ಯರಾದ ಅರುಣ್ ಎಂ ವಿಟ್ಲ, ವಿಕೆಎಂ ಅಶ್ರಫ್, ಅಶೋಕ್ ಕುಮಾರ್ ರೈ, ಹಸೈನಾರ್ ನೆಲ್ಲಿಗುಡ್ಡೆ, ವಸಂತ, ಜಯಂತ ಸಿ.ಎಚ್, ಹರೀಶ್ ಸಿ.ಎಚ್, ರಕ್ಷಿತಾ ಸನತ್, ಡೀಕಯ್ಯ, ಸುನೀತಾ, ವಿಜಯಲಕ್ಷ್ಮೀ, ಗೋಪಿಕೃಷ್ಣ, ಪದ್ಮಿನಿ, ಶಾಕೀರ, ಲತಾ ಅಶೋಕ್, ನಾಮನಿರ್ದೇಶಕ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಶ್ರೀನಿವಾಸ ಶೆಟ್ಟಿ ಕೊಲ್ಯ , ವಿವಿಧ ಇಲಾಖೆಗಳ ಅಧಿಕಾರಿಗಳು, ಪಟ್ಟಣ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು
Be the first to comment on "ವಿಟ್ಲ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಒತ್ತಾಯ"