ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ (ರಿ.) ೩೭ನೇ ವರ್ಷದ ಮಹಾಸಭೆ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಯು. ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೋಶಾಧಿಕಾರಿ ಬಿ. ಕೃಷ್ಣ ನಾಯಕ್ ಲೆಕ್ಕ ಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ೨೦೨೪-೨೫ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಎನ್. ದುರ್ಗಾದಾಸ್ ಶೆಣೈ, ಸರ್ವಾನುಮತದಿಂದ ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸುಬ್ರಹ್ಮಣ್ಯ ಪೈ, ಉಪಾಧ್ಯಕ್ಷರಾಗಿ ಆರ್. ಮಂಜುನಾಥ ಪೈ, ಜತೆ ಕಾರ್ಯದರ್ಶಿಯಾಗಿ ಕೆ. ರಘುವೀರ್ ಕಾಮತ್, ಎಸ್. ಪವನ್ ಕುಮಾರ್ ನಾಯಕ್, ಕೋಶಾಧಿಕಾರಿಯಾಗಿ ಬಿ. ಕೃಷ್ಣ ನಾಯಕ್, ಸದಸ್ಯರಾಗಿ ರಾಧಾಕೃಷ್ಣ ಬಾಳಿಗಾ, ದೇವಿದಾಸ್ ಭಟ್, ಎನ್. ಅನಂತಕೃಷ್ಣ ನಾಯಕ್, ಶ್ರೀಧರ ಹೆಗ್ಡೆ, ಮಧೂಸೂದನ್ ಶೆಣೈಇವರು ಆಯ್ಕೆಯಾದರು. ಯು. ಸುರೇಶ್ ನಾಯಕ್ ಗೌರವಾಧ್ಯಕ್ಷರನ್ನಾಗಿ ಮತ್ತು ಲೆಕ್ಕ ಪರಿಶೋಧಕರಾಗಿ ಪಿ. ನರೇಂದ್ರ ಪೈ ಮಂಗಳೂರು ಇವರನ್ನು ಆಯ್ಕೆ ಮಾಡಲಾಗಿದೆ.
Be the first to comment on "ಜಿಎಸ್‌ಬಿ ಸೇವಾ ಸಮಿತಿ ಮಹಾಸಭೆ, ನೂತನ ಆಡಳಿತ ಮಂಡಳಿ ಆಯ್ಕೆ"