ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಹಿನ್ನೆಲೆಯಲ್ಲಿ ಮೊದಲ ದಿನವಾದ ಶನಿವಾರ (ಜ.11) ಶ್ರೀ ದೇವರ ಉತ್ಸವ ಬಲಿ, ಕಟ್ಟೆಪೂಜೆ, ಶ್ರೀರಂಗಪೂಜೆ ನಡೆಯಿತು. ಭಾನುವಾರ ಜ.12ರಂದು ಬೆಳಗ್ಗೆ ದೀಪಬಲಿ, ಶ್ರೀಭೂತಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆದು ಧೂಮಾವತಿ ದೈವದ ಭಂಡಾರ ಏರುವ ಪ್ರಕ್ರಿಯೆ ನಡೆಯಿತು. ರಾತ್ರಿ ಧೂಮಾವತಿ ಮತ್ತು ಕೊರತಿ ದೈವಗಳಿಗೆ ನೇಮ ನಡೆಯಲಿದೆ. ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಆಡಳಿತ ಮೊಕ್ತೇಸರರಾದ ಸೇರಾಜೆ ಸತ್ಯನಾರಾಯಣ ಭಟ್, ಸದಸ್ಯರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದ್ದು, ಮೊದಲನೇ ಹಂತದ ಕೆಲಸ ಕಾರ್ಯಗಳ ಕುರಿತು ಪೂರ್ವಭಾವಿ ಸಭೆಯೂ ಇದೇ ವೇಳೆ ನಡೆಯಿತು.
PADYANA MAHALINGESHWARA TEMPLE, KAROPADI, BANTWAL TALUK, DAKSHINA KANNADA DISTRICT
Be the first to comment on "ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ"