ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ಬಾಳ್ತಿಲ, ಗೋಳ್ತಮಜಲು, ವೀರಕಂಭ, ಬೋಳಂತೂರು ಗ್ರಾಮಗಳನ್ನು ಒಳಗೊಂಡು ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಬೋಳಂತೂರು ಗ್ರಾ.ಪಂ ಕಚೇರಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಂತಿ ವಿ.ಪೂಜಾರಿ ಪ್ರತೀ ಗ್ರಾಮದ ಬಡವರಿಗೂ ಪಂಚ ಗ್ಯಾರಂಟಿ ಯೋಜನೆಯ ಪ್ರಯೋಜನ ದೊರೆಯಬೇಕು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಆಶಯ ಅದಕ್ಕೆ ಪೂರಕವಾಗಿ ಪ್ರತಿ ವಲಯದಲ್ಲಿ ಇದರ ಶಿಬಿರ ನಡೆಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಸಲಹೆಯಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಹಾಯದಿಂದ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು
ಮುಖ್ಯ ಅತಿಥಿಯಾಗಿ ಅಗಮಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಕ್ರಿಯಾಶೀಲ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ನೇತೃತ್ವದಲ್ಲಿ ಉತ್ತಮವಾದ ಕಾರ್ಯಕ್ರಮ ನಡೆಯುತ್ತಿದೆ,ಎಂದರು.
ತಾಲೂಕು ಪಂಚಾಯಿತಿ ಮಾಜಿ ಉಪಾದ್ಯಕ್ಷ ಅಬ್ಬಸ್ ಆಲಿ ಮಾತನಾಡಿ ರಾಜ್ಯದಲ್ಲಿಯೇ ಇಂಥ ಕಾರ್ಯಕ್ರಮ ಪ್ರಥಮವಾಗಿ ಬಂಟ್ವಾಳದಲ್ಲಿ ನಡೆಯುತ್ತಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ ಶುಭ ಹಾರೈಸಿದರು. ಬೊಳಂತೂರು ಗ್ರಾ.ಪಂ ಅದ್ಯಕ್ಷರಾದ ಶಾಲಿನಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾದ್ಯಕ್ಷರಾದ ಯಾಕುಬ್, ಗ್ರಾ.ಪಂ ಸದಸ್ಯರಾದ ಚಂದ್ರಶೇಖರ್ ರೈ, ಅಶ್ರಫ್, ಅನ್ಸಾರ್, ಹಿತಾ ಶೆಟ್ಟಿ, ಮಹಾಲಕ್ಷ್ಮೀ, ಅನಿತಾ, ಸಂಧ್ಯಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ, ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯರಾದ ನಾರಾಯಣ ನಾಯ್ಕ, ಅಲೆಸ್ಟರ್, ಪ್ರಮುಖರಾದ ವಿಶ್ವಾಜೀತ್ ರೈ, ತಾಲೂಕು ಗ್ಯಾರಂಟಿ ಯೋಜನೆಗಳ ಸದಸ್ಯರಾದ ಐಡಾ ಸುರೇಶ್, ಕಾಂಚಾಲಕ್ಷಿ, ಅಬ್ದುಲ್ ಕರೀಂ, ಕೃಷ್ಣಪ್ಪ ಪೂಜಾರಿ, ವಿನಯ್ ಕುಮಾರ್ ಸಿಂಧ್ಯಾ, ಸಿರಾಜ್ ಮದಕ, ಹರ್ಷನ್ ಬಿ, ಚಂದ್ರಶೇಖರ್ ಆಚಾರ್ಯ, ಸತೀಶ್ ಕೆ ಉಪಸ್ಥರಿದ್ದರು. ಸುಮಾರು 200 ರಿಂದ 250 ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
Be the first to comment on "ಪಂಚಗ್ಯಾರಂಟಿ ಯೋಜನೆ: ಬೋಳಂತೂರಿನಲ್ಲಿ ಅರ್ಜಿ ವಿಲೇವಾರಿ ಕಾರ್ಯಕ್ರಮ"