ಎಲ್ಲರೂ ಅವರ ಊರಿನ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು, ಸರ್ಕಾರಿ ಶಾಲೆಗಳನ್ನು ಕಡೆಗಣಿಸಬಾರದು ಹಾಗೂ ಅವುಗಳ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಬೇಕಾಗುತ್ತದೆ, ನಾನು ನಮ್ಮ ಊರಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವುದನ್ನು ಕಂಡು ನಾನು ಅವಿದ್ಯಾವಂತನಾದರೂ ನನ್ನ ಊರಿನ ಮಕ್ಕಳು ವಿದ್ಯಾವಂತರಾಗಿ ಒಂದು ಹಂತಕ್ಕೆ ತಲುಪಬೇಕು ಎನ್ನುವ ದೃಷ್ಟಿಯಿಂದ ಶಾಲೆಯನ್ನು ತೆರೆಯಲು ಕಾರಣವಾಯಿತು ಎಂದು ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಹೇಳಿದರು
ರಾಯಚೂರು ನಗರದ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ವತಿಯಿಂದ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಣ್ಣ ನೀರಾವರಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ ಎಸ್ ಬೋಸ್ ರಾಜ್ ಕಲ್ಯಾಣ ಕರ್ನಾಟಕ ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತದೆ, ಅಲ್ಲದೆ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತಿ ಹಿಂದುಳಿದ ಕಲ್ಯಾಣ ಕರ್ನಾಟಕದ ಹಲವು ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಖ್ಯೆ ನಿರ್ದಿಷ್ಟ ಅನುಪಾತಕ್ಕೆ ಸರಿಯಾಗಿ ಹೊಂದಿಕೊಂಡಾಗ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಲಾ ಸಂಕಲ ಸಂಸ್ಥೆಯ ಅಧ್ಯಕ್ಷರಾದ ರೇಖಾ ಬಡಿಗೇರ್ ಅವರು ವಹಿಸಿದ್ದರು.
ಈ ಸಂದರ್ಭ ಬಂಟ್ವಾಳ ತಾಲೂಕಿನ ವೀರಕಂಭ ಶಾಲೆಯ ಶಿಕ್ಷಕಿ ಸಂಗೀತಶರ್ಮ ಅವರಿಗೆ ಶಿಕ್ಷಕರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸ ಹಾಗೂ ಮೆಲ್ಕರ್ ಚಂದ್ರಿಕಾ ತರಕಾರಿ ಅಂಗಡಿಯ ಮಾಲಕರಾದ ಮಹಮದ್ ಶರೀಫ್ ಇವರಿಗೆ “ಸಮಾಜ ಸೇವ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.ಉಳಿದಂತೆ ಪ್ರತಿ ಜಿಲ್ಲೆಯಿಂದ ಆಯ್ಕೆ ಮಾಡಲಾದ ಶಿಕ್ಷಕರಿಗೆ ಹಾಗೂ ಸಮಾಜಸೇವಕರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಿಕ್ಷಣ ಪ್ರೇಮಿ ಸೇವಾ ಕಾಲೇಜಿನ ಡಾ. ಶರಣಬಸವ ಪಾಟೀಲ್ ಜೋಳದಡಗಿ ಮಾತನಾಡಿ ಕಲಾ ಸಂಕುಲ ಸಂಸ್ಥೆ ಯಾಗಿದ್ದು ಅದ್ಭುತ ಸಾಧಕರನ್ನು ರಾಯಚೂರಿಗೆ ಪರಿಚಯಿಸುತ್ತಿರುವ ಉತ್ತಮ ವೇದಿಕೆಯನ್ನು ರೂಪಿಸುವಂತಹ ಕೆಲಸವನ್ನು ರೇಖಾ ಬಡಿಗೇರ್ ಮತ್ತು ಮಾರುತಿ ಬಡಿಗೇರ್ ಮಾಡುತ್ತಿದ್ದಾರೆ ಇವರು ಆದರ್ಶ ದಂಪತಿಗಳಾಗಿ ಬೇರೆಯವರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು,ಕಿರುತೆರೆ ನಟಿ ರಜಿನಿ ಬೆಂಗಳೂರು ಹಾಗೂ ಕಲಾವಿದೆ ಭಾರತಿ ಗೋಪಾಲ್ ಹೆಬ್ರಿ ಇವರನ್ನು ಸನ್ಮಾನಿಸಲಾಯಿತು,ವೈದ್ಯ ರತ್ನ ಪ್ರಶಸ್ತಿ ಪಡೆದಿರುವ ಡಾ. ಎನ್ ವಿಜಯಶಂಕರ ಅವರನ್ನು ಅಭಿನಂದಿಸಲಾಯಿತು.ಕೇರಳದ ಲಿಬೀನ್ ಕೃಷ್ಣ ಉಪಸ್ಥಿತರಿದ್ದರು, ಕಾರ್ಯದರ್ಶಿ ಮಾರುತಿ ಬಡಿಗೇರ್ ಸ್ವಾಗತಿಸಿ ಡಾ. ವಿಜಯ ಕಾರ್ಯಕ್ರಮ ನಿರುಪಿಸಿದರು. ಕಲಾವಿದರಾದ ಅಮರಗೌಡ ಮಹಾಲಕ್ಷ್ಮಿ ಚಿರಂಜೀವಿ ಯಾದವ್ ಸಯ್ಯದ್ ಅಲಿ ಮೌನೇಶ ಮಹೇಶ ಗೋವಿಂದ ವಡವಾಟಿ ಇನ್ನಿತರ ಭಾಗವಹಿಸಿದ್ದರು.
Be the first to comment on "ಸರಕಾರಿ ಶಾಲೆಗಳನ್ನು ಯಾರೂ ಕಡೆಗಣಿಸಬಾರದು: ಹರೇಕಳ ಹಾಜಬ್ಬ"