ಬಂಟ್ವಾಳ: ಬಂಟ್ವಾಳದ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಶ್ರಾವಣ ಮಾಸ ಯಕ್ಷಗಾನ ತಾಳಮದ್ದಳೆಯ ಸಮಾರೋಪ ಸಮಾರಂಭ ನಡೆಯಿತು.
ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶ್ರೀ ಕೃಷ್ಣ ಕಾರುಣ್ಯ ಎಂಬ ಕಥಾ ಬಾಗವನ್ನು ಜರಗಿಸಲಾಯಿತು. ಹಿರಿಯ ಕಲಾವಿದರಾದ ಪಕಳಕುಂಜ ಶ್ಯಾಮ್ ಭಟ್ ಮತ್ತು ರಾಮಣ್ಣ ಅನಂತಾಡಿ ಅವರನ್ನು ಸನ್ಮಾನಿಸಲಾಯಿತು.
ಸಭಾದ್ಯಕ್ಷರಾಗಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಶೋಕ ಶೆಣೈ ಅಭಿನಂದನೆಗಳನ್ನು ಕಲಾವಿದರಿಗೆ ಸಮರ್ಪಿಸಿ, ಭವಿಷ್ಯದಲ್ಲಿಯೂ ಎಲ್ಲ ಕಲಾವಿದರ ಸಹಕಾರವನ್ನು ಅಪೇಕ್ಷಿಸಿದರು. ನಾಗೇಂದ್ರ ಪೈ ಸ್ವಾಗತಿಸಿದರು. ಕಾರ್ಯದರ್ಶಿ ಎ. ಯೋಗೀಶ್ ಪ್ರಭು ವರದಿ ವಾಚಿಸಿದರು. ಮುರಳೀದರ ನೇರಂಕಿ ಸನ್ಮಾನ ಪತ್ರ ವಾಚಿಸಿದರು. ಪಿ ವಸಂತ ಪ್ರಭು ವಂದಿಸಿದರು. ಸೀತಾರಾಮ ಸಹಕರಿಸಿದರು. ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ದೇವಳದಲ್ಲಿ ಶ್ರಾವಣ ಮಾಸ ತಾಳಮದ್ದಳೆ ಸಮಾರೋಪ"