ಬಂಟ್ವಾಳ: ಬಂಟ್ವಾಳ ತಾಲೂಕು ಕೊಯಿಲದ ಶ್ರೀ ಗುರುಗಣೇಶ್ ಭಜನಾ ಮಂಡಳಿ (ರಿ) ಆಶ್ರಯದಲ್ಲಿ ಲ.ದೇವಪ್ಪ ಶೆಟ್ಟಿ ಕ್ರೀಡಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತದ 20ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು
ಶ್ರೀ ಮಾವಂತೂರು ಮಹಾಗಣಪತಿ ದೇವಸ್ಥಾನ ಕೊಯಿಲ ಪ್ರಧಾನ ಅರ್ಚಕರಾದ ಸುಂದರ ಹೊಳ್ಳ ಸಜಂಕಬೆಟ್ಟು ಧ್ವಜಾರೋಹಣ ನೆರವೇರಿಸಿದರು. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವೇದಿಕೆಯಲ್ಲಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಭಗವದ್ಗೀತೆ ಪಠಣ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷರಾದ ಕೀರ್ತನ್ ಕೊಯಿಲ ವಹಿಸಿದ್ದರು. ದಕ್ಷಿಣ ಕನ್ನಡ ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ನಂದನ್ ಮಲ್ಯ, ಕಾರ್ಯದರ್ಶಿಗಳಾದ ಪ್ರಕಾಶ್ ಗರೋಡಿ, ಹಿಂದೂ ಧರ್ಮೋಥಾನ ಟ್ರಸ್ಟ್ ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಂತೋಷ್ ರಾಯಿಬೆಟ್ಟು, ಲೋಕೇಶ್ ಕೋಡಿಕೆರೆ, ಸಾಕ್ಷಾತ್ ಶೆಟ್ಟಿ ಕಾವೂರು ಹಾಗೂ ಶೇಖರ್ ಅಂಚನ್ ಉಪಸ್ಥಿತರಿದ್ದರು. ನೂತನ ಸಂಸದರಾಗಿ ಆಯ್ಕೆಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭಿನಂದಿಸಲಾಯಿತು. ಸಾಮಾಜಿಕ ,ಸಾಂಸ್ಕೃತಿಕ ,ಶೈಕ್ಷಣಿಕ ,ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಸಮಾರಂಭ ನೆರವೇರಿತು .ಈ ಸಂದರ್ಭ ದಿಕ್ಸೂಚಿ ಭಾಷಣ ವನ್ನು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಬಳಿಕ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ “ಕದಂಬ” ನಾಟಕ ಪ್ರದರ್ಶನ ನಡೆಯಿತು
Be the first to comment on "ಕೊಯಿಲ ಶ್ರೀಗುರುಗಣೇಶ ಭಜನಾ ಮಂಡಳಿಯಿಂದ ಮೊಸರು ಕುಡಿಕೆ ಉತ್ಸವ"