ಮೈಸೂರಿನಲ್ಲಿ ನಡೆದ ಬಾಲಕರ ಕರ್ನಾಟಕ ರಾಜ್ಯ ವೈಟ್‌ಲಿಪ್ಟಿಂಗ್ ಚಾಂಪಿಯನ್‌ಷಿಪ್ 2024-25ರಲ್ಲಿ ರೈಫಾನ್ ಅಹಮದ್ 3ನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವೈಟ್‌ಲಿಫ್ಟರ್ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ವೈಟ್‌ಲಿಫ್ಟರ್ ಸಂಸ್ಥೆ, ದೈಹಿಕ ಶಿಕ್ಷಕರ ಅಕಾಡೆಮಿ ವತಿಯಿಂದ ಮೈಸೂರಿನ ಮಹಾಜನ ಡಿಗ್ರಿ ಕಾಲೇಜು ಕ್ರೀಡಾಂಗಣದಲ್ಲಿ ಆಗಸ್ಟ್ 17-18ರಂದು ನಡೆದ ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಜೂನಿಯರ್ 61 ಕೆ.ಜಿ. ವಿಭಾಗದಲ್ಲಿ ರೈಫಾನ್ ಅಹಮದ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಮಂಗಳೂರು ಎಸ್.ಡಿ.ಎಂ. ಕಾಲೇಜಿನಲ್ಲಿ ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿಯಾಗಿರುವ ರೈಫಾನ್ ಅಹಮದ್, ಬಿ.ಸಿ. ರೋಡ್ ಶಾಂತಿಅಂಗಡಿ ನಿವಾಸಿ ರಫೀಕ್ – ಜೊಹರಾ ದಂಪತಿ ಪುತ್ರ. ಮಂಗಳೂರಿನ ಮಂಗಳಾ ಥ್ರೋವರ‍್ಸ್ ಅಕಾಡೆಮಿಯಲ್ಲಿ ಪುಷ್ಪರಾಜ್ ಹೆಗ್ಡೆ ಮತ್ತು ಸುದರ್ಶನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರಾಜ್ಯಮಟ್ಟದ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್: ರೈಫಾನ್ ತೃತೀಯ"