ಬಿ.ಸಿ.ರೋಡ್ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೋಟಗಾರಿಕೆ ಮಾಹಿತಿ, ಕಾರ್ಯಾನುಭವ ಪ್ರಾತ್ಯಕ್ಷಿಕೆ ಶನಿವಾರ ನಡೆಯಿತು. ಶಾಲೆಯ ಹಿರಿಯ ವಿದ್ಯಾರ್ಥಿಗಳೂ ಪತ್ರಕರ್ತರೂ, ಜೇಸಿ ವಲಯ ತರಬೇತುದಾರರೂ ಆಗಿರುವ ಸಂದೀಪ್ ಸಾಲ್ಯಾನ್ ವಿದ್ಯಾರ್ಥಿಗಳಿಗೆ ತರಕಾರಿ ಗಿಡಗಳ ಕುರಿತು ಮಾಹಿತಿ ನೀಡಿ, ಅವುಗಳ ಬೀಜಬಿತ್ತನೆಯ ವಿಧಾನಗಳನ್ನು ತಿಳಿಸಿದರು.
ಸ್ವತಃ ಶ್ರಮದಾನ ಮಾಡುವ ಮೂಲಕ ಮಕ್ಕಳಿಗೆ ಕಾರ್ಯಾನುಭವದ ಪ್ರಾತ್ಯಕ್ಷಿಕೆ ಮಾಡಿದರು. ತರಕಾರಿ ಕೃಷಿಗೆ ಮಣ್ಣು , ಗೊಬ್ಬರವನ್ನು ತಂದು, ಮಕ್ಕಳಿಂದ ನಾಟಿ ಮಾಡಿಸಿದರು. ಬಳಿಕ ಸೂಕ್ತವಾದ ಬೇಲಿಯನ್ನು ರಚಿಸಲಾಯಿತು. ಶಾಲೆಯ ಮಕ್ಕಳಿಗೆ ತೋಟಗಾರಿಕೆಯ ಪಾಠವನ್ನು ತಿಳಿಸುವುದರ ಜೊತೆ ಕಾರ್ಯಾನುಭವ ದೊರಕಿತು. ಶಾಲೆಯ ಮುಖ್ಯ ಶಿಕ್ಷಕಿ, ಹಾಗೂ ಸಹಶಿಕ್ಷಕಿಯರು ಹಾಗೂ ಶಿಕ್ಷಕವೃಂದ ಜತೆಗೂಡಿದರು.
Be the first to comment on "ಮಕ್ಕಳಿಗೆ ತೋಟರಚನೆ ಪಾಠ, ತರಕಾರಿ ಗಿಡಗಳ ನಾಟಿ"