ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಒಂಭತ್ತನೇ ತರಗತಿಯ ಸ್ವಸ್ತಿ ಎಸ್. ರೈ ಆಟಿ ಆಚರಣೆಯ ಮಹತ್ವ ವಿವರಿಸಿದಳು.
ಈ ಸಂದರ್ಭ ತುಳುನಾಡ ಮಹತ್ವದ ಆಟಿ ತಿಂಗಳಿಗೆ ಸಂಬಂಧಿಸಿದ ತಿನಿಸುಗಳ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಭಾಮಿ ನಾಗೇಂದ್ರನಾಥ್ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ಬಿ ಎಚ್ ಗಿರೀಶ್ ಪೈ, ಬಿ ವೆಂಕಟ್ರಮಣ ಶೆಣೈ, ಪಿ ಪ್ರಕಾಶ ಕಿಣಿ, ಭಾಮೀ ಲಕ್ಷ್ಮಣ್ ಶೆಣೈ.ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿ ಸೋಜಾ, ಜಾನಕಿ ರಾಜೇಶ್ ಮತ್ತಿತರರು ಹಾಜರಿದ್ದರು. ಹತ್ತನೇ ತರಗತಿಯ ಮಕ್ಕಳು ನಿರ್ವಹಿಸಿದ ಕಾರ್ಯಕ್ರಮದಲ್ಲಿ ದೀಕ್ಷಾ ಸ್ವಾಗತಿಸಿದರು. ಕೃಪಾ ಕಾರ್ಯಕ್ರಮ ನಿರೂಪಿಸಿದರು. ಸಹನಾ ವಂದಿಸಿದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಆಟಿ ಆಚರಣೆಯ ಮಹತ್ವ ಸಾರಿದ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ‘ಆಟಿಡೊಂಜಿ ದಿನ’"