ಪುತ್ತೂರು: ಶುಕ್ರವಾರ ಚುನಾವಣೆಯ ದಿನ ನಡೆಯಲು ಅಸಾಧ್ಯವಾದ ಕಾರಣ, ವ್ಹೀಲ್ ಚೇರ್ ನಲ್ಲಿ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದ ಸಂತೃಪ್ತಿಯಿಂದ ಮರಳಿದ ಪುತ್ತೂರು ಬೊಳುವಾರು ನಿವಾಸಿ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ದೇವಕಿ ಎಸ್. ಭಟ್ (82) ಅವರು ಏಪ್ರಿಲ್ 26ರ ರಾತ್ರಿ ನಿಧನಹೊಂದಿದರು.
ಬೆಳಗ್ಗೆ ಬೊಳುವಾರು ಸರಕಾರಿ ಶಾಲಾ ಮತಗಟ್ಟೆಗೆ ಆಗಮಿಸಿದ್ದ ಅವರು, ಬಿಎಲ್ಒ ಯಶೋಧಾ ಅವರ ಸಹಾಯದಿಂದ ಗಾಲಿಕುರ್ಚಿಯ ಮೂಲಕ ತೆರಳಿ, ಮತ ಚಲಾವಣೆ ಮಾಡಿದ್ದರು. ಬಳಿಕ ಮನೆಗೆ ಮರಳಿದ್ದ ಅವರು ರಾತ್ರಿ ಊಟ ಮುಗಿಸಿ, ಮಲಗಿದ್ದರು. ತಡರಾತ್ರಿ ವೇಳೆ ಅವರು ನಿಧನಹೊಂದಿದ್ದರು. ಪತಿ, ಆರು ಪುತ್ರಿಯರ ಸಹಿತ ಅಪಾರ ಬಂಧು ಬಾಂಧವರನ್ನು ಅವರು ಅಗಲಿದ್ದು, ಶನಿವಾರ ಅಂತ್ಯಕ್ರಿಯೆ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂಧೂರು, ಪುತ್ತೂರು ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ರಾಮದಾಸ ಹಾರಾಡಿ, ಪ್ರಮುಖರಾದ ದಯಾಕರ್ ಸಹಿತ ಹಲವರು ಮೃತರ ಅಂತಿಮ ದರ್ಶನ ಪಡೆದರು.
Be the first to comment on "PUTTUR: ಪುತ್ತೂರು: ವ್ಹೀಲ್ ಚೇರ್ ನಲ್ಲಿ ಆಗಮಿಸಿ ಮತ ಚಲಾಯಿಸಿದ ದೇವಕಿ ಭಟ್ ನಿಧನ"