ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಕಾಲಾವಧಿ ಬ್ರಹ್ಮರಥೋತ್ಸವದ ಸಂಬಂಧ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಬಾರಿ ಬ್ರಹ್ಮರಥದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಗಮಿಸಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.
ಮಂಗಳವಾರ ಗರುಡೋತ್ಸವ ಕಾರ್ಯಕ್ರಮಗಳು ನಡೆದವು. ಮೊಕ್ತೇಸರರ ಹತ್ತು ಸಮಸ್ತರ ಪ್ರಾರ್ಥನೆ ಬಳಿಕ ಸೇವಾ ಯಜಮಾನರ ಪ್ರಾರ್ಥನೆ ತರುವಾಯ ಮಹಾಪೂಜಾರಂಭ, ಅಭಿಷೇಕಾದಿಗಳು ನಡೆದವು. ಬಳಿಕ ಯಜ್ಞಾರಂಭ, ಯಜ್ಞಾರತಿ, ಧ್ವಜಾರೋಹಣ, ಬಲಿ, ಬೆಳ್ಳಿಪಾಲ್ಕಿ ಹಗಲೋತ್ಸವ, ಸಮಾರಾಧನೆ, ದೀಪನಮಸ್ಕಾರ, ರಾತ್ರೆ ಬಲಿ, ಗೋಪುರೋತ್ಸವ, ಗರುಡೋತ್ಸವ, ವಸಂತ ಪೂಜೆ ಇತ್ಯಾದಿ ನಡೆದವು. ಬುಧವಾರ ಹನುಮಂತೋತ್ಸವ ಕಾರ್ಯಕ್ರಮಗಳು ನಡೆದವು. ಸೇವೆಯ ಯಜಮಾನರ ಪ್ರಾರ್ಥನೆ, ಮಹಾಪೂಜಾರಂಭ, ಅಭಿಷೇಕಾದಿಗಳು, ಯಜ್ಞಾರಂಭ, ಯಜ್ಞಾರತಿ, ಬಲಿ, ಬೆಳ್ಳಿಪಾಲ್ಕಿ ಹಗಲೋತ್ಸವ, ಸಮಾರಾಧನೆ, ದೀಪ ನಮಸ್ಕಾರ, ರಾತ್ರೆ ಬಲಿ, ಗೋಪುರೋತ್ಸವ, ಹನುಮಂತೋತ್ಸವ ನಡೆದವು. ಬಳಿಕ ವಸಂತ ಪೂಜೆ ಕಾರ್ಯಕ್ರಮಗಳು ಸಂಪನ್ನಗೊಂಡವು
Be the first to comment on "ಬಂಟ್ವಾಳ ಬ್ರಹ್ಮರಥೋತ್ಸವ 200ನೇ ಸಂಭ್ರಮ: ಹಲವು ಕಾರ್ಯಕ್ರಮ"