ಆನ್ ಲೈನ್ ಮೂಲಕ ಬಂದ ಪ್ರೊಡಕ್ಟ್ ಕುರಿತು ವಿಚಾರಿಸಿದ ಸಂದರ್ಭ ಬ್ಯಾಂಕ್ ಖಾತೆ ವಿವರ ನೀಡಿ ವಂಚನೆಗೊಳಗಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊಡಂಕಾಪು ನಿವಾಸಿ ಮಹಿಳೆಯೊಬ್ಬರು ಆನ್ ಲೈನ್ ಮೂಲಕ ಪ್ರಾಡಕ್ಟ್ ಒಂದನ್ನು ಬುಕ್ ಮಾಡಿದ್ದರು. ಅದರಂತೆ ಆನ್ ಲೈನ್ ಮೂಲಕ ಬಂದ ಪ್ರೊಡಕ್ಟ್ ಸರಿಯಿರದ ಹಿನ್ನೆಲೆ ಸಂಬಂಧಪಟ್ಟ ಸಂಸ್ಥೆಗೆ ವಿಚಾರಿಸುವ ಸಲುವಾಗಿ ಸಂಸ್ಥೆಯ ಸಂಪರ್ಕ ಸಂಖ್ಯೆಯನ್ನು ಗೂಗಲ್ ಮೂಲಕ ಪಡೆದು ಕರೆ ಮಾಡಿರುತ್ತಾರೆ. ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ಸೂಚಿಸಿದಂತೆ ಅವರ ಬ್ಯಾಂಕ್ ಖಾತೆ ವಿವರ, ಎ.ಟಿ.ಎಮ್. ಕಾರ್ಡ್ ನ ವಿವರಗಳನ್ನು ನೀಡಿದ್ದು, ಬ್ಯಾಂಕ್ ಖಾತೆಯಿಂದ 63,000 ರೂ ಹಣವು ಬೇರೆ ಯಾವುದೋ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Be the first to comment on "ಆನ್ ಲೈನ್ ವಂಚನೆ: ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ"