


ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಸೋಮವಾರದ ಮಳೆಗೆ ಹಲವೆಡೆ ಹಾನಿ ಉಂಟಾಗಿದೆ. ಅನಂತಾಡಿ ಗ್ರಾಮದ ಬೊಗ್ಗಂಡ ಮನೆ ಎಂಬಲ್ಲಿ ವಿಶ್ವನಾಥ ಪೂಜಾರಿ ಎಂಬುವರ ವಾಸದ ಮನೆಯು ತೀವ್ರ ಹಾನಿಯಾಗಿದ್ದು ಸಂಪೂರ್ಣ ಬೀಳುವ ಸಂಭವವಿರುತ್ತದೆ. ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಾವೂರು ಗ್ರಾಮದ ಸೆಬಾಸ್ಟಿಯನ್ ಆಲ್ಬುಕರ್ಕ್ ಅವರ ವಾಸ್ತವ್ಯ ಮನೆಯು ಗಾಳಿ-ಮಳೆಯಿಂದಾಗಿ ತೀವ್ರವಾಗಿ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಸಂಜೀವ ಎಂಬುವವರ ವಾಸ್ತವ್ಯದ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ಹಲಸಿನ ಮರ ಬಿದ್ದು ಹಾನಿಯಾಗಿರುತ್ತದೆ. ಮೇರೆಮಜಲಿನಲ್ಲಿ ಸೇಸಮ್ಮ ಎಂಬವರ ಮನೆಯ ಮಾಡು ಕಳಚಿಬಿದ್ದಿದೆ.
Be the first to comment on "ಬಂಟ್ವಾಳ: ಹಲವು ಮನೆಗಳಿಗೆ ಮಳೆಯಿಂದ ಹಾನಿ"