ಬಂಟ್ವಾಳ: ವಿಶ್ವ ಹಿಂದು ಪರಿಷದ್, ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ನಮ್ಮ ನಡೆ ಪೊಳಲಿ ದೇವಸ್ಥಾನ ಕಡೆ ಕಾರ್ಯಕ್ರಮ ಭಾನುವಾರ ಏಪ್ರಿಲ್ 2ರಂದು ನಡೆಯಲಿದೆ ಎಂದು ಅಧ್ಯಕ್ಷ ಪ್ರಸಾದ್ ಕುಮಾರ್ ಮತ್ತು ಕಾರ್ಯದರ್ಶಿ ದೀಪಕ್ ಅಜೆಕಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 5.30ಕ್ಕೆ ಪಾದಯಾತ್ರೆ ಮೂರು ಕಡೆಗಳಿಂದ ಹೊರಡಲಿದೆ. ಪೊಳಲಿ ದ್ವಾರಗಳಾದ ಕಡೆಗೋಳಿ, ಬಿ.ಸಿ.ರೋಡಿನ ಕೈಕಂಬ, ಗುರುಪುರ ಕೈಕಂಬಗಳಿಂದ ಯಾತ್ರೆ ಹೊರಡಲಿದ್ದು, ಲೋಕಕಲ್ಯಾಣ, ಹಿಂದು ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆ ರಕ್ಷಣೆ ಯಾತ್ರೆ ಉದ್ದೇಶ ಎಂದವರು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರು ವಸ್ತ್ರಸಂಹಿತೆ ಪಾಲನೆ, ಗೋಸಂರಕ್ಷಣೆಗೆ ಸುಸಜ್ಜಿತ ಗೋಶಾಲೆ ನಿರ್ಮಾಣ, ಹಿಂದು ಬಾಲ ಸಂಸ್ಕಾರ ಕೇಂದ್ರ ಸ್ಥಾಪನೆ, ಉಚಿತ ಸಾಮೂಹಿಕ ವಿವಾಹ, ಜಾತ್ರೆ ಸಂದರ್ಭ ಹಿಂದುಗಳಿಗೆ ಮಾತ್ರ ವ್ಯಾಪಾರ, ದೇವಳದ ವತಿಯಿಂದ ಉತ್ಸವಾದಿ ಸಂದರ್ಭ ರಾತ್ರಿ ಭೋಜನ ವ್ಯವಸ್ಥೆ ಏರ್ಪಡಿಸುವುದೇ ಮೊದಲಾದ ಬೇಡಿಕೆಗಳನ್ನು ಮಂಡಿಸಲಾಗಿದೆ. ಬೆಳಗ್ಗೆ 9ಕ್ಕೆ ಯಾತ್ರೆ ಪೊಳಲಿ ದೇವಸ್ಥಾನ ತಲುಪಿ ಸಮಾಪನಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.
Be the first to comment on "ಏ.2ರಂದು ವಿಶ್ವ ಹಿಂದು ಪರಿಷದ್, ಬಜರಂಗದಳ ಬಂಟ್ವಾಳ ಪ್ರಖಂಡದಿಂದ ನಮ್ಮ ನಡೆ, ಪೊಳಲಿ ದೇವಸ್ಥಾನದ ಕಡೆ"