ಬಂಟ್ವಾಳ: ಇತ್ತೀಚೆಗೆ ನಡೆದ, ಜಿಲ್ಲೆಯ ಸ್ಕೌಟ್ ವಿದ್ಯಾರ್ಥಿಗಳು ಹಾಗೂ ಗೈಡ್ ವಿದ್ಯಾರ್ಥಿನಿಯರ ತೃತೀಯ ಸೋಪಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಮಾನ್ಯ ಜಿಲ್ಲಾಧಿಕಾರಿಯವರ ಅಧಿಕೃತ ನಿವಾಸದಲ್ಲಿ , ಭಾನುವಾರ ನಡೆಯಿತು.
ಜಾಹೀರಾತು
ಈ ಕಾರ್ಯಕ್ರಮದಲ್ಲಿ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ವಿದ್ಯಾರ್ಥಿನಿಯರಾದ ಸೃಜನ, ಅಕ್ಷತಾ ಪೈ, ಮಂಜುಷಾ, ಹಾಗೂ ಸ್ಕೌಟ್ ವಿದ್ಯಾರ್ಥಿ ಗಳಾದ ಸಾತ್ವಿಕ್, ಯಶ್ ಕಾವ, ಆಕರ್ಷ, ರುಚಿರ್, ಆಲೇನ್ ರಿಯನ್, ಅನಿಶ್ ಕೃಷ್ಣ ಇವರುಗಳು ಭಾಗವಹಿಸಿದರು. ಗೈಡ್ ಶಿಕ್ಷಕಿಯವರಾದ ಜಯಶ್ರೀ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳ ಜತೆಗೆ ಭಾಗವಹಿಸಿದರು. ಜಿಲ್ಲಾಧಿಕಾರಿಯವರಿಂದ ಸೃಜನ ಮತ್ತು ಸಾತ್ವಿಕ್ ಪ್ರಶಸ್ತಿಪತ್ರ ಪಡೆದುಕೊಂಡರು. ಶಾಲೆಯ ಆಡಳಿತಾಧ್ಯಕ್ಷರಾದ ಎಲ್. ಎನ್. ಕೂಡೂರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳಿಗೆ ತೃತೀಯ ಸೋಪಾನ ಪ್ರಶಸ್ತಿ ಪತ್ರ ಪ್ರದಾನ"