ಬಂಟ್ವಾಳ: ಅಲೆತ್ತೂರು ಬಿ.ಸಿ.ರೋಡಿನ ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ) 24ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಮತ್ತು 41ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಶನಿವಾರ ಮಾರ್ಚ್ 4ರಂದು ಸಂಜೆ 7.30ಕ್ಕೆ ಅಲೆತ್ತೂರಿನ ಮಂಗಳಾ ಭವನದಲ್ಲಿ ನಡೆಯಲಿದೆ.
ಜಾಹೀರಾತು
ಮಂಗಳಾ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ನೇಮಿರಾಜ ಶೆಟ್ಟಿ ಕೊಡಂಗೆ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಪುರಸಭಾ ಸದಸ್ಯ ಗೋವಿಂದ ಪ್ರಭು, ವಿವಿಧ ಪ್ರಮುಖರಾದ ಸತೀಶ್ ಭಂಡಾರಿ, ಬಿ.ಮೋಹನ್ ಮತ್ತಿತರರು ಭಾಗವಹಿಸುವರು. ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಕುಸಲ್ದ ಗೊಬ್ಬು ನಾಟಕ ಇರಲಿದೆ ಎಂದು ಅಧ್ಯಕ್ಷ ವಿಜಯ್ ಸುವರ್ಣ, ಕಾರ್ಯದರ್ಶಿ ಪ್ರಶಾಂತ್, ಉಪಾಧ್ಯಕ್ಷ ನಿತಿನ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಅಕ್ಷಯ್, ಅಶ್ವತ್ಥ, ಜತೆ ಕಾರ್ಯದರ್ಶಿ ಪವನ್ ಕುಲಾಲ್, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ತಿಳಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಶನಿವಾರ ಅಲೆತ್ತೂರಿನಲ್ಲಿ 24ನೇ ವರ್ಷದ ಶನೈಶ್ಚರ ಪೂಜೆ, 41ನೇ ವರ್ಷದ ವಾರ್ಷಿಕೋತ್ಸವ"