ಬಿ.ಸಿ.ರೋಡಿನ ಎಟಿಎಂ ಒಂದರಲ್ಲಿ 9 ಸಾವಿರ ರೂಪಾಯಿ ಇದ್ದುದನ್ನು ಕಂಡು ಅದನ್ನು ತಾಲೂಕು ಕಚೇರಿಯ ಕಂದಾಯ ಇಲಾಖೆ ಸಿಬಂದಿ ಸೀತಾರಾಮ್ ಅವರು ಪೊಲೀಸರಿಗೆ ಒಪ್ಪಿಸಿದ್ದು, ಬಳಿಕ ವಾರೀಸುದಾರರ ಕೈಗೆ ಅದನ್ನು ಮರಳಿಸಲಾಯಿತು.
ಜಾಹೀರಾತು
ಫೆ. 27 ರಂದು ಬಿಸಿರೋಡಿನ ಕೆನರಾ ಬ್ಯಾಂಕ್ ಎ.ಟಿ.ಎಮ್ ನಲ್ಲಿ ಹಣ ಡ್ರಾ ಮಾಡಲೆಂದು ತೆರಳಿದ್ದ ತಾಲೂಕು ಕಚೇರಿ ಸಿಬ್ಬಂದಿ ಸೀತಾರಾಮ ಅವರು ಎಟಿಎಮ್ ನಲ್ಲೇ ಬಾಕಿಯಾಗಿದ್ದ 9000 ನಗದು ಹಣವನ್ನು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ತಂದು ಒಪ್ಪಿಸಿದ್ದು, ಬಂಟ್ವಾಳ ಪೋಲೀಸರು ಕೆನರಾ ಬ್ಯಾಂಕ್ ಸಹಾಯ ಪಡೆದು ವಾರೀಸುದಾರನ್ನು ಪತ್ತೆ ಮಾಡಿದಾಗ ಮುಕ್ತಬಾಯಿ ಎಂದು ತಿಳಿದುಬಂತು. ಅವರನ್ನು ಠಾಣೆಗೆ ಕರೆದು ಇಂದು ಫೆ. 2 ರಂದು ಹಸ್ತಾಂತರ ಮಾಡಲಾಯಿತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಎಟಿಎಂನಲ್ಲಿತ್ತು 9 ಸಾವಿರ ರೂ ನಗದು: ಕಂದಾಯ ಇಲಾಖೆ ಸಿಬಂದಿ ನೆರವಿನಿಂದ ಮರಳಿತು ವಾರೀಸುದಾರರ ಕೈಗೆ"