ಬಂಟ್ವಾಳ: ಜಿ.ಎಸ್.ಬಿ. ಸಮಾಜ ಸೇವಾ ಸಮಿತಿ (ರಿ) ವತಿಯಿಂದ ಬಿ.ಸಿ.ರೋಡಿನ ಗೀತಾಂಜಲಿ ಕಲಯಾಣ ಮಂಟಪದಲ್ಲಿ ವಾರ್ಷಿಕ 22ನೇ ವರ್ಧಂತ್ಯುತ್ಸವ ಹಿನ್ನೆಲೆಯಲ್ಲಿ ಸತ್ಯನಾರಾಯಣ ಪೂಜೆ ಮತ್ತು ಜಿ.ಎಸ್.ಬಿ.ಸಮ್ಮಿಲನ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಮಂಜೇಶ್ವರದ ವಾಸ್ತುತಜ್ಞ ಛತ್ರಪತಿ ಶಿವಾಜಿ ಪ್ರಭು ಈ ಸಂದರ್ಭ ಮಾತನಾಡಿ, ಅಹಂ, ಸ್ವ ಪ್ರತಿಷ್ಠೆ, ವೈಯುಕ್ತಿಕ ದ್ವೇಷಗಳನ್ನು ಬಿಟ್ಟು ಸಮಾಜ ಹಾಗೂ ಸಂಘ ಸಂಸ್ಥೆಯಲ್ಲಿ ಐಕ್ಯಮತ್ಯದಿಂದ ತೊಡಗಿಸಿಕೊಂಡರೆ ಅದೇ ನಾವು ಸಮಾಜಕ್ಕೆ ಸಲ್ಲಿಸುವ ಅತೀ ದೊಡ್ಡ ಕಾಣಿಕೆ ಎಂದರು.
ಸಾಮಾಜಿಕ ಚಿಂತನೆ, ದೈವ ಭಕ್ತಿ, ಗುರುಹಿರಿಯರಲ್ಲಿ ಗೌರವ, ಧಾರ್ಮಿಕ ಚಿಂತನೆ ಹಾಗೂ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಗೊಂಡರೆ ಮುಂಬರುವ ಭವ್ಯ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ಪಾಣೆಮಂಗಳೂರು ಶ್ರೀ ವೀರ ವಿಠಲ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಎನ್. ಪ್ರಮೋದ್ ಭಟ್‌ಹೇಳಿದರು
ಸಮಿತಿಯ ಅಧ್ಯಕ್ಷರಾದ ಯು. ಸುರೇಶ್ ನಾಯಕ್ ಸಭಾಧ್ಯಕ್ಷತೆ ವಹಿಸಿದರು. ದುರ್ಗಾದಾಸ್ ಶೆಣೈ, ಅನಂತಕೃಷ್ಣ ನಾಯಕ್, ರಘುವೀರ್ ಕಾಮತ್, ರಂಜಿತಾ ಕುಮಾರ್ ಭಟ್, ಪವನ್ ಕುಮಾರ್ ನಾಯಕ್, ರಾಧಾಕೃಷ್ಣ ಬಾಳಿಗ,ಯು. ಗಣೇಶ್ ನಾಯಕ್ ಹಾಗೂ ಇತರ ಸದಸ್ಯರು ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಪೈ ಸ್ವಾಗತಿಸಿ, ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Be the first to comment on "ಜಿ.ಎಸ್.ಬಿ.ಸಮಾಜ ಸೇವಾ ಸಮಿತಿ ವತಿಯಿಂದ ವರ್ಧಂತ್ಯುತ್ಸವ"