ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಸಿ.ರೋಡಿನ ಚಿಕ್ಕಯ್ಯನಮಠ ಎಂಬಲ್ಲಿ ಹಾಡಹಗಲೇ ಮನೆಯೊಂದಕ್ಕೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗ, ನಗದನ್ನು ಕಳವು ಮಾಡಿದ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಸತೀಶ್ ಮತ್ತು ಸಂಧ್ಯಾ ದಂಪತಿ ವಾಸವಿರುವ ಮನೆಯಿಂದ ಕಳವಾಗಿದ್ದು, ಈ ಕುರಿತು ಸಂಧ್ಯಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಕೃತ್ಯ ಎಸಗಲಾಗಿದೆ.
ಮನೆಯ ಮುಂಬಾಗಿಲ ಚಿಲಕ ಮುರಿದು ಒಳಗೆ ನುಗ್ಗಿರುವ ಕಳ್ಳರು ಕಪಾಟಿನಲ್ಲಿದ್ದ ಸುಮಾರು 4.60 ಮೌಲ್ಯದ 11.5 ಪವನ್ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಸತೀಶ್ ಅವರ ಪತ್ನಿ ಸಂಧ್ಯಾ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸತೀಶ್ ಬೆಳಗ್ಗೆ ಕೆಲಸಕ್ಕೆ ತೆರಳಿದ್ದರೆ ಅವರ ಪತ್ನಿ ಹಾಗೂ ಮಗಳು ತಾಯಿ ಮನೆಗೆಂದು ತೆರಳಿದ್ದರು ಸಂಜೆ 6 ಗಂಟೆ ವೇಳೆಗೆ ಮನೆಗೆ ವಾಪಾಸ್ ಬಂದು ನೋಡಿದಾಗ ಮನೆಯ ಮುಂಬಾಗಿಲು ತೆರೆದ ಸ್ಥಿತಿಯಲ್ಲಿದ್ದರೆ,ಕೊಠಡಿಯಲ್ಲಿದ್ದ ಕಪಾಟು ಕೂಡ ತೆರದಿದ್ದು ಬಟ್ಟೆ ಚೆಲ್ಲಾಪಿಲ್ಲಿಯಾಗಿತ್ತು. ಕಪಾಟಿನಲ್ಲಿರಿಸಿದ ಚಿನ್ನಾಬವರಣ ಕಳವಾಗಿರುವುದು ಪ್ರಕರಣ ಬೆಳಕಿಗೆ ಬಂದಿದೆ.
Be the first to comment on "ಹಾಡಹಗಲೇ ಕಳವು: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕದ್ದೊಯ್ದರು"