



ಗೋಳ್ತಮಜಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಳೆಹಾನಿಯ ಯೋಜನೆಯಡಿಯಲ್ಲಿ 8.30 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡವನ್ನು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು.
ತಾಲೂಕಿನ ಎಲ್ಲಾ ಶಾಲೆಗಳ ಕೊಠಡಿಗಳನ್ನು ಮಕ್ಕಳಿಗೆ ಶಿಕ್ಷಣಕ್ಕೆ ಯೋಗ್ಯವಾಗುವ ರೀತಿಯಲ್ಲಿ ದುರಸ್ತಿಗೊಳಿಸಿ ಅಗತ್ಯವಿದ್ದ ಕಡೆಗಳಲ್ಲಿ ಹೊಸ ಕಟ್ಟಡಗಳನ್ನು ಕೂಡ ನೀಡಲಾಗುವುದು ಎಂದು ಹೇಳಿದರು.
ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ , ಪಿಡಿಒ ವಿಜಯ್ ಶಂಕರ್ ಆಳ್ವ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಊರಿನ ಪ್ರಮುಖರಾದ ಶ್ಯಾಮ್ ಭಟ್ ತೋಟ, ಪಂಚಾಯತ್ ಸದಸ್ಯರುಗಳಾದ ಪುರುಷೋತ್ತಮ, ನಳಿನಿ ಸರೋಜಿನಿ, ಎಸ್ ಡಿಎಂಸಿ ಅಧ್ಯಕ್ಷರಾದ ವೆಂಕಪ್ಪ ವೇದಿಕೆಯಲ್ಲಿದ್ದರು.
ಪ್ರಮುಖರಾದ ಚಂದ್ರಶೇಖರ್ ಟೈಲರ್ ಮಹಾಬಲ ಆಳ್ವ ಮೋನಪ್ಪ ದೇವಸ್ಯ ಶೇಖರ್ ಜಿ ಕೊಟ್ಟಾರಿ, ನಾರಾಯಣ ಪೂಜಾರಿ ಸುಂದರ ಶೆಟ್ಟಿ, ಐತಪ್ಪ ಪೂಜಾರಿ, ರಾಮಣ್ಣ ಶೆಟ್ಟಿ ,ರವಿ ಬಲ್ಕಟ್ಟ, ನಾರಾಯಣ ರಾವ್ ನೆಟ್ಲ, ವಿಶ್ವನಾಥ ಮುರಬೈಲು,ಪಂ ಸದಸ್ಯರಾದ ಎಲಿಯಾಸ್, ಜಯಂತ್ ಗೌಡ ಕರಿಂಗಾನ, ವೀರಕಂಬ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಮಾ ಇವರು ಪ್ರಸ್ತಾವನೆಗೈದು ,ಸಹ ಶಿಕ್ಷಕಿ ದೇವಕಿ ಸ್ವಾಗತಿಸಿದರು.ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು .
Be the first to comment on "ಗೋಳ್ತಮಜಲು ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನೆ"