ಮೆಲ್ಕಾರ್: ಆರ್.ಜೆ. ಗೋಲ್ಡ್ & ಡೈಮಂಡ್ ವಿಸ್ತೃತ ಚಿನ್ನಾಭರಣ ಮಳಿಗೆ ಉದ್ಘಾಟನೆ

ಚಿನ್ನದ ಉದ್ಯಮದಲ್ಲಿ ಪಾರದರ್ಶಕತೆ, ನೈತಿಕತೆಯನ್ನು ಬೆಳೆಸಿಕೊಂಡು ಮುನ್ನಡೆದಾಗ ಯಶಸ್ಸು ಕಾಣುವುದು. ಆರ್.ಜೆ. ಗೋಲ್ಡ್ ಈ ನಿಟ್ಟಿನಲ್ಲಿ ಹೆಸರುವಾಸಿಯಾಗಿದೆ. ಇದು ಹೀಗೇ ಮುಂದುವರಿಯಲಿ ಎಂದು ಆಧ್ಯಾತ್ಮಿಕ ನೇತಾರರಾದ ಕುಂಬೋಲ್ ಕೆ.ಎಸ್. ಆಟಕೋಯ ತಂಙಳ್ ಹೇಳಿದರು.

ಅವರು ಗುರುವಾರ (26/05) ಮೆಲ್ಕಾರ್ ಎಂ.ಎಚ್. ಹೈಟ್ಸ್ ನಲ್ಲಿ ಆರ್.ಜೆ. ಗೋಲ್ಡ್ ಇದರ ವಿಸ್ತೃತ ಮಳಿಗೆಯನ್ನು ಉದ್ಘಾಟಿಸಿ ದುವಾಶೀರ್ವಚನಗೈದರು.

ಕೆ.ಪಿ. ಇರ್ಶಾದ್ ದಾರಿಮಿ ಅಲ್ ಜಝೂರಿ ಮಿತ್ತಬೈಲ್ ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಮಾತನಾಡಿ ಅಲ್ಪಾವಧಿಯಲ್ಲೇ ಆರ್.ಜೆ. ಗೋಲ್ಡ್ ಮೆಲ್ಕಾರ್ ಪರಿಸರದಲ್ಲಿ ಮನೆಮಾತಾಗಿದೆ. ವಿಸ್ತೃತ ಶೋರೂಮ್ ಇನ್ನಷ್ಟು ಮೆರುಗು ನೀಡಿದೆ ಎಂದು ಹೇಳಿದರು.

ಜಾಹೀರಾತು

ದ.ಕ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಫುರಸಭೆ ಸದಸ್ಯರಾದ ಮೂನಿಷ್ ಅಲಿ ಮತ್ತು ಇದ್ರಿಶ್ ಪಿ.ಜೆ., ಮಂಗಳೂರು ಮಹಾನಗರಪಾಲಿಕೆ ಮಾಜಿ ಮೇಯರ್ ಶಶಿಧರ ಹೆಗ್ಡೆ, ಚಿಕ್ಕಮಗಳೂರು ಜಿ.ಪಂ. ಮಾಜಿ ಸದಸ್ಯ ಪ್ರಭಾಕರ ಕಳಸ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ನಾರ್ಶ, ವಿಟ್ಲ ಎಂಪೈರ್ ಮಾಲ್ ಪಾಲುದಾರ ಪೀಟರ್ ಲಸ್ರಾದೋ, ಸುಳ್ಯ ರಾಜಧಾನಿ ಜ್ಯುವೆಲ್ಲರ್ಸ್ ಮಾಲಕ ಅಬ್ದುಲ್ ರಝಾಕ್ ಹಾಜಿ, ಸಾಮಾಜಿಕ ನೇತಾರ ಶಾಕಿರ್ ಅಳಕೆಮಜಲು, ಮುಬೀನ್ ವಿಟ್ಲ, ಅಬ್ಬಾಸ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಆರ್.ಜೆ. ಗೋಲ್ಡ್ & ಡೈಮಂಡ್ ಮಾಲಕರಾದ ತಾನಾಜಿ ಬಾಬರ್ ಮಾತನಾಡಿ 2018 ರಲ್ಲಿ ಸಣ್ಣ ಶೋರೂಮ್ ಮೆಲ್ಕಾರಲ್ಲಿ ಪ್ರಾರಂಭಿಸಲಾಯಿತು. ಗ್ರಾಹಕರ ಹೆಚ್ಚಿನ ಪ್ರೋತ್ಸಾಹದಿಂದ ಇದೀಗ ವಿಸ್ತರಣೆಗೊಂಡಿದೆ. 2004 ರಲ್ಲಿ ವಿಟ್ಲದಲ್ಲಿ ಪ್ರಾರಂಭವಾದ ಸಂಸ್ಥೆ ಪ್ರಸ್ತುತ ದ.ಕ. ಜಿಲ್ಲೆಯಲ್ಲಿ 6 ಶಾಖೆಗಳನ್ನು ಹೊಂದಿವೆ ಎಂದರು.

ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಪ್ರಥಮ ಗ್ರಾಹಕರಾದ ಅಬೂಬಕರ್ ಉಪ್ಪಿನಂಗಡಿ ಅವರಿಗೆ ಕುಂಬೋಲ್ ತಂಙಳ್ ಚಿನ್ನಾಭರಣ ಹಸ್ತಾಂತರಿಸಿದರು. ಉದ್ಘಾಟನೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಲಕ್ಕಿ ಕೂಪನ್ ಡ್ರಾ ಮಾಡಲಾಯಿತು. ಪ್ರಥಮ ಬಹುಮಾನ ಡೈಮಂಡ್ ಉಂಗುರವನ್ನು ಮುಸ್ತಫ ರಂಗೇಲು ವಿಜೇತರಾದರು. ದ್ವಿತೀಯ ಬಹುಮಾನ ಚಿನ್ನದ ನಾಣ್ಯವನ್ನು ನೂರುನ್ನಾಸಾ ಬೋಗೋಡಿ ಪಡೆದರು ಹಾಗೂ 10 ಆಕರ್ಷಕ ಬಹುಮಾನ ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಮೆಲ್ಕಾರ್: ಆರ್.ಜೆ. ಗೋಲ್ಡ್ & ಡೈಮಂಡ್ ವಿಸ್ತೃತ ಚಿನ್ನಾಭರಣ ಮಳಿಗೆ ಉದ್ಘಾಟನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*