ಹರೀಶ ಮಾಂಬಾಡಿ, www.bantwalnews.com
ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶವಾದ ಪೆರುವಾಯಿ ಗ್ರಾಪಂ 8 ಸದಸ್ಯರಿರುವ ಸಣ್ಣ ಪಂಚಾಯಿತಿ. ಇದರ ಉಪಾಧ್ಯಕ್ಷೆ 29ರ ಹರೆಯದ ನೆಫಿಸಾ ತಸ್ಲಿ ಅವರು ಸ್ವಚ್ಛತೆಗಾಗಿ ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ಕೆ ಪ್ರೇರಣೆ ನೀಡುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.
ಕಳೆದ ಒಂದು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ವಾಹಿನಿಗೆ ಚಾಲನೆ ನೀಡಿದ್ದೇನೆ. ಪಂಚಾಯಿತಿಯಲ್ಲಿ ಸುಮಾರು 600 ಮನೆಗಳಿದ್ದು, ಪ್ರತಿ ಮನೆಯಿಂದ ವಾರಕ್ಕೆ ಎರಡು ಬಾರಿಯಾದರೂ ತ್ಯಾಜ್ಯ ಸಂಗ್ರಹವಾಗುವಂತೆ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ. ನಾಲ್ಕು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ವಾಹನ ಬಂದಿತ್ತು. ಗ್ರಾಮದ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಮಹಿಳಾ ಚಾಲಕರನ್ನು ನೇಮಿಸಲು ತೀರ್ಮಾನಿಸಲಾಗಿತ್ತು. ಅದರಂತೆ ನಿಯೋಜಿತಳಾಗಿರುವ ಚಾಲಕಿ ಇನ್ನೂ ಸಮರ್ಪಕ ತರಬೇತಿ ಪಡೆದಿರಲಿಲ್ಲ. ನಾನು ಕಾರು ಚಲಾಯಿಸಿಕೊಂಡು ಕಚೇರಿಗೆ ಬರುತ್ತೇನೆ, ಡ್ರೈವಿಂಗ್ ನನಗೆ ಗೊತ್ತಿರುವ ಕಾರಣ ನಾನೇ ಏಕೆ ಇದನ್ನು ನಿರ್ವಹಿಸಬಾರದು ಎಂದು ಯೋಚಿಸಿ ಪಿಡಿಒ ಮತ್ತು ಇತರ ಸದಸ್ಯರ ಪ್ರೋತ್ಸಾಹದಿಂದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ನೆಫೀಸಾ ತಿಳಿಸಿದರು.
Be the first to comment on "ಸ್ವತಃ ಸ್ವಚ್ಛತಾ ಅಭಿಯಾನದ ವಾಹನಕ್ಕೆ ಡ್ರೈವರ್ ಆದ ಪೆರುವಾಯಿ ಗ್ರಾಪಂ ಉಪಾಧ್ಯಕ್ಷೆ"