ಬಂಟ್ವಾಳ: ಬಂಟ್ವಾಳ ಶ್ರೀತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಳೆ ಸೇವೆ ಜುಲೈ 29ರಿಂದ ಆಗಸ್ಟ್ 28ರವರೆಗೆ ನಡೆಯಲಿದೆ. ಯಕ್ಷಗಾನ ಸಂಘದವರು ಭಾಗವಹಿಸಿ ಸೇವೆಯನ್ನು ಯಶಸ್ವಿಗೊಳಿಸಿ, ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಸೇವೆಯ ಸಮಯ ಸಂಜೆ 6.30ರಿಂದ ರಾತ್ರಿ 9.30ರವರೆಗೆ ಇದ್ದು, ಭಾಗವಹಿಸುವ ತಂಡಗಳು ತಮಗೆ ಅನುಕೂಲವಾಗುವ ಕನಿಷ್ಠ 5 ದಿನಗಳನ್ನು ತಿಳಿಸಿದರೆ, ಒಂದು ದಿನ ಆಯ್ಕೆ ಮಾಡಿ ತಿಳಿಸಲಾಗುವುದು, ಯಾವುದೇ ವೆಚ್ಚ ನೀಡಲಾಗುವುದಿಲ್ಲ, ಯಕ್ಷಗಾನ ಸಾಹಿತ್ಯ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9071923352 ಅಥವಾ 9480974139 ಸಂಪರ್ಕಿಸುವುದು. ಆಗಸ್ಟ್ 28ರಂದು ವಾರ್ಷಿಕೋತ್ಸವ ತಾಳಮದ್ದಳೆ ಮಧ್ಯಾಹ್ನ 1.30 ಕ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದಲ್ಲಿ ಶ್ರಾವಣ ಮಾಸ ತಾಳಮದ್ದಳೆ ಸೇವೆಗೆ ಆಹ್ವಾನ"