ಅಳಿಕೆ ಮತ್ತು ವಿಟ್ಲ ಜೇಸಿ ಶಾಲೆ ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ಸ್
ಮಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 17 ಮಂದಿ 625ರಲ್ಲಿ 625 ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 28638 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 25052 ತೇರ್ಗಡೆ ಹೊಂದಿದ್ದಾರೆ. ಜಿಲ್ಲಾ ಗ್ರೇಡ್ ಎ ಲಭಿಸಿದ್ದು, ಗುಣಾತ್ಮಕ ಫಲಿತಾಂಶ ಶೇಕಡಾ 78.20 ಆಗಿದೆ. ಶೇ.100 ಫಲಿತಾಂಶವನ್ನು 75 ಶಾಲೆಗಳು ದಾಖಲಿಸಿವೆ.
189 ಸರ್ಕಾರಿ ಶಾಲೆಗಳಲ್ಲಿ 89 ಎ ಗ್ರೇಡ್, 69 ಬಿ ಗ್ರೇಡ್ ಮತ್ತು 31 ಸಿ ಗ್ರೇಡ್ ಪಡೆದಿದೆ. ಒಟ್ಟಾರೆಯಾಗಿ 523 ಶಾಲೆಗಳಲ್ಲಿ 322 ಎ ಗ್ರೇಡ್, 148 ಬಿ ಮತ್ತು 53 ಸಿ ಗ್ರೇಡ್ ಪಡೆದಿದೆ.
ಗುಣಾತ್ಮಕ ಫಲಿತಾಂಶದ ವಿವರ ಹೀಗಿದೆ. ಬಂಟ್ವಾಳ ತಾಲೂಕು ಶೇ.75.27 ಫಲಿತಾಂಶ ದಾಖಲಿಸಿ 6 ನೇ ಸ್ಥಾನ ಪಡೆದಿದ್ದರೆ (2021ರಲ್ಲಿ 80.89 ಶೇ. 4ನೇ ಸ್ಥಾನ), ಬೆಳ್ತಂಗಡಿ ಶೇ.80.52 ಫಲಿತಾಂಶ ದಾಖಲಿಸಿ 3ನೇ ಸ್ಥಾನ ಪಡೆದಿದೆ. ಕಳೆದ ವರ್ಷ 1ನೇ ಸ್ಥಾನದಲ್ಲಿತ್ತು. ಮಂಗಳೂರು ಉತ್ತರ 80.6 ಶೇ. ಫಲಿತಾಂಶದೊಂದಿಗೆ 2, ದಕ್ಷಿಣ ಶೇ.74.59 ಫಲಿತಾಂಶದೊಂದಿಗೆ 7ನೇ ಸ್ಥಾನ ಪಡೆದಿದೆ.
ಬಂಟ್ವಾಳದಲ್ಲಿ 3 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಖಾಸಗಿ ಶಾಲೆಗಳು ಸೇರಿ ಒಟ್ಟು 11 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. ಒಟ್ಟಾರೆಯಾಗಿ ದ.ಕ.ಜಿಲ್ಲೆಯಲ್ಲಿ 22 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.
ಸುಜಯ್ (ಅಳಿಕೆ), ಧನ್ಯಶ್ರೀ (ವಿಟ್ಲ ಜೇಸಿ), ರೋಷನ್ (ಮಚ್ಚಿನ), ಮಧುಶ್ರೀ (ಸೈಂಟ್ ಮೇರೀಸ್ ಲಾಯ್ಲ), ಅಕ್ಷತಾ ಕಾಮತ್ (ಕಿಲ್ಪಾಡಿ), ವೀಕ್ಷಾ ಶೆಟ್ಟಿ (ಕಿಲ್ಪಾಡಿ), ಶ್ರೀಜಾ ಹೆಬ್ಬಾರ್ (ಮೂಡುಬಿದಿರೆ) , ಸ್ವಸ್ತಿ (ಮೂಡುಬಿದಿರೆ), ಇಂದಿರಾ ಅರುಣ್, ಶ್ರೇಯಾ ಆರ್. ಶೆಟ್ಟಿ, ಸುದೇಶ್ ದತ್ತಾತ್ರಿ, ಈರಯ್ಯ ಶ್ರೀಶೈಲ, ಕಲ್ಮೇಶ್ವರಿ (ಆಳ್ವಾಸ್), ಅಭಯ ಶರ್ಮ, ಅಭಿಜ್ಞ, ಆತ್ಮೀಯ ಕಶ್ಯಪ್, (ಪುತ್ತೂರು ವಿವೇಕಾನಂದ) ಸಾತ್ವಿಕ್ (ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಳ್ಯ) 625 ಅಂಕ ಗಳಿಸಿದವರು.
Be the first to comment on "ಎಸ್ಸೆಸ್ಸೆಲ್ಸಿ ರಿಸಲ್ಟ್: ಬಂಟ್ವಾಳ ತಾಲೂಕಿನ ಇಬ್ಬರು ಸೇರಿ ದ.ಕ.ಜಿಲ್ಲೆಯ 17 ಮಂದಿಗೆ 625ರಲ್ಲಿ 625 ಅಂಕ"