www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ವತಿಯಿಂದ ಕಾಗ್ನಿಜೆಂಟ್ – ರೋಟರಿ ಪ್ರಾಯೋಕತ್ವದಲ್ಲಿ ೧೫ ಕಂಪ್ಯೂಟರ್ ಹಸ್ತಾಂತರ ಹಾಗೂ ಕಂಪ್ಯಟೂರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ಸಿದ್ಧಕಟ್ಟೆಯ ಸರಕಾರಿ ಪದವಿ ಕಾಲೇಜಿನಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಲ್ಯಾಬ್ ಉದ್ಘಾಟಿಸಿ ಕಂಪ್ಯೂಟರ್ ಹಸ್ತಾಂತರಿಸಿದರು. ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್‌ನ ಅಧ್ಯಕ್ಷ ರಾಘವೇಂದ್ರ ಭಟ್ ಪ್ರಾಸ್ತವಿಕವಾಗಿ ಮಾತನಾಡಿದರು.ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ, ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು, ರೋಟರಿ ವಲಯ ಲೆಪ್ಟಿನೆಂಟ್ ಅವಿಲ್ ಮಿನೇಜಸ್, ಸುರೇಶ್ ಕುಲಾಲ್, ದಾಮೋದರ ಪೂಜಾರಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ರೋಟರಿ ಸದಸ್ಯರಾದ ಸೀತರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಸೌಮ್ಯ ಎಚ್.ಕೆ. ಸ್ವಾಗತಿಸಿದರು. ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್‌ನ ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ ವಂದಿಸಿದರು.
Be the first to comment on "ಸಿದ್ಧಕಟ್ಟೆ ಕಾಲೇಜಿಗೆ ರೋಟರಿಯಿಂದ 15 ಕಂಪ್ಯೂಟರ್ ಹಸ್ತಾಂತರ, ಲ್ಯಾಬ್ ಉದ್ಘಾಟನೆ"