ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವಾಣಿಜ್ಯ ಸಂಕೀರ್ಣ ಡಿ.31ಕ್ಕೆ ಲೋಕಾರ್ಪಣೆ

ಜಾಹೀರಾತು

ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ ಹಾಗೂ ವೀರ ಸಾವರ್ಕರ್ ವಾಣಿಜ್ಯ ಕಟ್ಟಡ, ನೇತಾಜಿ ಬಹೂಪಯೋಗಿ ಸೇವಾ ಕೇಂದ್ರ, ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ, ನವೀಕೃತ ಕಚೇರಿ ಉದ್ಘಾಟನಾ ಸಮಾರಂಭ ಸಂಘದ ಆವರಣದಲ್ಲಿ ಡಿ.31ರಂದು ಬೆಳಗ್ಗೆ ನಡೆಯಲಿದೆ.

ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಕರ್ಪೆ ಸಂಘದ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಾಹೀರಾತು

ವೀರ ಸಾವರ್ಕರ್ ವಾಣಿಜ್ಯ ಕಟ್ಟಡವನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಲಿದ್ದು, ಅಮೃತ ಮಹೋತ್ಸವಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡುವರು. ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣವನ್ನು ಸಚಿವ ವಿ.ಸುನಿಲ್ ಕುಮಾರ್ ಹಾಗೂ ನೇತಾಜಿ ಬಹೂಪಯೋಗಿ ಸೇವಾ ಕೇಂದ್ರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ ಬಾಗಲಕೋಟೆ ನವೀಕೃತ ಕಚೇರಿ ಉದ್ಘಾಟಿಸಲಿದ್ದು, ಸಾಧಕರಿಗೆ ದ.ಕ.ಜಿ.ಸೇ.ಸ.ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಸನ್ಮಾನಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ವಹಿಸುವರು ಎಂದರು.

ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ೧೯೪೭ರಲ್ಲಿ ದಿವಂಗತ ಬಿ.ಕೃಷ್ಣ ರೈಯವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿ ೨೦೨೨ಕ್ಕೆ ೭೫ ವರ್ಷಗಳು ಆಗಿರುವುದರಿಂದ ಈ ಬಗ್ಗೆ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಆಚರಣೆಯ ಈ ವರ್ಷದಲ್ಲಿ ಸ್ವಾತಂತ್ರ್ಯಕ್ಕಾಗಿ ವೀರ ಮರಣ ಹೊಂದಿರುವ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ನೆನಪಿಗಾಗಿ ನಿರ್ಮಿಸಲಾದ ವೀರ ಸಾವರ್ಕರ್ ವಾಣಿಜ್ಯ ಸಂಕೀರ್ಣವನ್ನು ಶನಿವಾರ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿ ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳ್ಳಲಿದೆ. ಅಮೃತ ಮಹೋತ್ಸವದ ದೀಪ ಪ್ರಜ್ವಲನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷರಾದ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ನೆರವೇರಿಸಲಿರುವರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಸವಿನೆನಪಿಗಾಗಿ ನೇತಾಜಿ ಬಹುಪಯೋಗಿ ಸೇವಾಕೇಂದ್ರವನ್ನು ಸಂಸದರು ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಸಂಘದ ಸ್ಥಾಪಕ ಅಧ್ಯಕ್ಷ ಬಿ.ಕೃಷ್ಣ ರೈ ಸ್ಮರಣಾರ್ಥವಾಗಿ ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ವಿ.ಸುನಿಲ್ ಕುಮಾರ್, ನವೀಕೃತ ಕಛೇರಿಯನ್ನು ಮಾಜಿ ಶಾಸಕರು ಹಾಗೂ ಸಹಕಾರ ಭಾರತಿ ಭಾರತಿ ಕರ್ನಾಟಕ ರಾಜ್ಯದ ಅಧ್ಯಕ್ಷರಾದ ಶ್ರೀ ರಾಜಶೇಖರ ಶೀಲವಂತ ಬಾಗಲಕೋಟೆ ಉದ್ಘಾಟಿಸಲಿದ್ದು ವಿವಿಧ ಕ್ಷೇತ್ರದ ಸಾಧಕರನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಟಿ.ಜಿ.ರಾಮ್ ಭಟ್ ಗೌರವಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ||ಎಂ.ಎನ್.ರಾಜೇಂದ್ರಕುಮಾರ್ ವಹಿಸಲಿರುವರು ಎಂದರು.

ಜಾಹೀರಾತು

ಶ್ರೀ ಕ್ಷೇತ್ರ ಪುಂಜ ದೇವಸ್ಥಾನದ ಅಸ್ರಣ್ಣರಾದ ಶ್ರೀ ಕೃಷ್ಣ ಪ್ರಸಾದ್ ಆಚಾರ್ಯ, ಪ್ರಧಾನ ಅರ್ಚಕರಾದ ಪ್ರಕಾಶ್ ಆಚಾರ್ಯರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ. ಸಂಘದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿವೃತ್ತ ಅಧಿಕಾರಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ನಡೆಯುವುದು ಎಂದರು,

ಶ್ರೀ ಎ.ಗೋಪಿನಾಥ ರೈ ಮಾಜಿ ಅಧ್ಯಕ್ಷರು, ಶ್ರೀ ಪದ್ಮರಾಜ ಬಲ್ಲಾಳ್, ಮಾವಂತೂರು ಮಾಜಿ ಅಧ್ಯಕ್ಷರು, ಶ್ರೀ ಪ್ರಭಾಕರ ಐಗಳ್ ಮಾಜಿ ಉಪಾಧ್ಯಕ್ಷರು, ಶ್ರೀ ಎಸ್.ಅರ್ಕಕೀರ್ತಿ ಇಂದ್ರ ಮಾಜಿ ಉಪಾಧ್ಯಕ್ಷರು, ಶ್ರೀ ಯು.ಗೋಪಾಲ ಬಂಗೇರ ಮಾಜಿ ಉಪಾಧ್ಯಕ್ಷರು, ಶ್ರೀ ಚಂದ್ರನಾಥ ಇಂದ್ರ ನಿವೃತ್ತ ಕಾರ್ಯದರ್ಶಿ, ಶ್ರೀ ಶೀನ ಶೆಟ್ಟಿ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ನಾಗರಾಜ ಬಂಗ, ನಿವೃತ್ತ ಲೆಕ್ಕಿಗ, ಶ್ರೀ ಜನಾರ್ಧನ ಶೆಟಟಿಗಾರ್ ನಿವೃತ್ತ ಪ್ರಥಮ ದರ್ಜೆ ಗುಮಾಸ್ತರು, ಶ್ರೀ ಜಗತ್ಪಾಲ ಶೆಟ್ಟಿ, ಉಮನೊಟ್ಟು(ಪ್ರಗತಿಪರ ಕೃಷಿಕರು), ಶ್ರೀ ವಾಸು ಪೂಜಾರಿ ಕುಲಾವು(ನಾಟಿ ವೈದ್ಯರು), ಶ್ರೀ ಮನೀಷ್ ಶೆಟ್ಟಿ (ಸ್ಟಾರ್ ಸುವರ್ಣ ಕಾಮಿಡಿ ಗ್ಯಾಂಗ್ಸ್), ಶ್ರೀ ಸುಭಾಶ್ ಪರಾಡ್ಕರ್ (ಸಾವಯವ ಕೃಷಿ), ಶ್ರೀ ದಾಸಪ್ಪ ಪರವ, ಕೊಯಿಲ(ಭೂತಾರಾಧನೆ), ಶ್ರೀ ಸದಾಶಿವ ಶೆಟ್ಟಿಗಾರ್(ಯಕ್ಷಗಾನ), ಶ್ರೀಮತಿ ಅನಿತಾ ಮೊರಾಸ್ (ಹೈನುಗಾರಿಕೆ), ಕು.ಲಿಖಿತಾ (ದ.ಕ.ಜಿಲ್ಲಾ ಪ್ರತಿಭಾ ಕಾರಂಜಿ ೨೦೨೨ರ ಕನ್ನಡ ಭಾಷಣ ಸ್ಪರ್ಧೆ ಪ್ರಥಮ) ಅವರನ್ನು ಗೌರವಿಸಲಾಗುವುದು ಎಂದರು.

೭೫ನೇ ವರ್ಷ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ಕಿಸಾನ್ ಕ್ರೆಡಿಟ್ ಕಾಡ್  ಸಹಿತ ಬೆಳೆ ಸಾಲ, ಕೃಷಿ ಅಭಿವೃದ್ದಿ ಸಾಲ, ಅಡವು ಸಾಲ, ಜಾಮೀನು ಸಾಲ ಸೇರಿದಂತೆ ಒಟ್ಟು ಈ ವರ್ಷ ಈಗಾಗಲೇ ೭೫ ಕೋಟಿಗೂ ಅಧಿಕ ಸಾಲ ನೀಡಲಾಗಿದ್ದು ಆರ್ಥಿಕ ವರ್ಷ ಅಂತ್ಯಕ್ಕೆ ೧೦೦ ಕೋಟಿ ಸಾಲ ನೀಡಲು ಗುರಿ ಹೊಂದಲಾಗಿದೆ.

ಜಾಹೀರಾತು

ಕೇಂದ್ರದ ಎಂ.ಎಸ್.ಸಿ. ಯೋಜನೆಯಿಂದ ಪ್ರಾಥಮಿಕ ಸಹಕಾರ ಸಂಘಗಳು ಸಕ್ರಿಯ:  ೨೦೨೩ರ ಒಳಗೆ ದೇಶದಾದ್ಯಂತ ೩೫,೦೦೦ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳನ್ನು ಪರಿವರ್ತಿಸುವ ಉದ್ದೇಶದಿಂದ ಕೇಂದ್ರ ಸರಕಾರ ನಬಾಡ್  ಸಹಕಾರದಲ್ಲಿ ಶೇ ೧ರಷ್ಟು ದರದಲ್ಲಿ ವಿಶೇಷ ದೀರ್ಘಾವಧಿಯ ಮರು ಹಣಕಾಸು ಸಾಲ ಸೌಲಭ್ಯವನ್ನು ನೀಡುತ್ತಿದ್ದು ಈ ಯೋಜನೆ ಸಹಕಾರ ಸಂಘಗಳು ಸಕ್ರಿಯವಾಗಲು ಕಾರಣವಾಗಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರವರನ್ನು ಎಲ್ಲಾ ಸಹಕಾರಿ ಸಂಘಗಳ ಪರವಾಗಿ ಈ ಸಂದರ್ಭದಲ್ಲಿ ಅವರು ಅಭಿನಂದಿಸಿದರು.

ಈ ಯೋಜನೆ ಪ್ರಮುಖವಾಗಿ ಕೃಷಿ ಶೇಖರಣಾ ಕೇಂದ್ರ, ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಕೃಷಿ ಸೇವಾ ಕೇಂದ್ರ, ಕೃಷಿ ಸಂಸ್ಕರಣಾ ಕೇಂದ್ರ, ಕೃಷಿ ಮಾಹಿತಿ ಕೇಂದ್ರ, ಕೃಷಿ ಸಾರಿಗೆ ಅವಶ್ಯಕತೆಗಳಿಗೆ ಮ್ಯಾಪಿಂಗ್ ಮಾಡುವ ಮೂಲಕ ಅಗತ್ಯಕ್ಕೆ ತಕ್ಕಂತೆ ಅನುದಾನವನ್ನು ಪಡೆಯಲು ಅವಕಾಶ ಬರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸತೀಶ್ ಪೂಜಾರಿ, ಸಿಇಒ ಆರತಿ ಶೆಟ್ಟಿ, ನಿರ್ದೇಶಕರಾದ ಸಂದೇಶ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ದಿನೇಶ್ ಪೂಜಾರಿ ಹುಲಿಮೇರು, ಉಮೇಶ್ ಗೌಡ ಮಂಚಕಲ್ಲು, ಜಾರಪ್ಪ ನಾಯ್ಕ, ವೀರಪ್ಪ ಪರವ, ದೇವರಾಜ ಸಾಲ್ಯಾನ್,  ಮಾಧವ ಶೆಟ್ಟಿಗಾರ್, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ, ಶಾಖಾ ಪ್ರಬಂಧಕರಾದ ಸಚಿನ್ ಜೈನ್, ಜೇಸನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಜಾಹೀರಾತು

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವಾಣಿಜ್ಯ ಸಂಕೀರ್ಣ ಡಿ.31ಕ್ಕೆ ಲೋಕಾರ್ಪಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*