ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಬೆಂಗಳೂರಿನ ಇಡಿಆರ್ ಟಿ ಟ್ರಸ್ಟ್ ನಿಂದ ಬಂಟ್ವಾಳ ತಾಲೂಕಿನ ಕೊಯಿಲ, ಸಿದ್ಧಕಟ್ಟೆ, ವಾಮದಪದವು, ನೈನಾಡು ಮತ್ತು ಪಂಜಿಕಲ್ಲುವಿನ ಒಟ್ಟು 5 ಸರ್ಕಾರಿ ಹೈಸ್ಕೂಲ್ ಗಳ ವಿದ್ಯಾರ್ಥಿಗಳಿಗೆ 532 ಬ್ಯಾಗು ಮತ್ತು 2364 ಪುಸ್ತಕಗಳನ್ನು ವಿತರಿಸಲಾಯಿತು.
ಇಡಿಆರ್ ಟಿ ಟ್ರಸ್ಟ್ ರತ್ನಾ, ಜೆಇಆರ್ ಇ ಪುಸ್ತಕ ಮತ್ತು ಬ್ಯಾಗ್ ಗಳನ್ನು ವಿತರಿಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಕಾರ ಪ್ರಮುಖ್ ಮೀನಾಕ್ಷಿ ರಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಪ್ರಮುಖರಾದ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ನಾಯಕ್ ಕರ್ಪೆ, ತಾಪಂ ಮಾಜಿ ಸದಸ್ಯ ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ ವಾಮದಪದವು, ರಾಯಿ ಗ್ರಾಪಂ ಅಧ್ಯಕ್ಷೆ ರತ್ನಾ, ಪಿಲಾತಬೆಟ್ಟು ಗ್ರಾಪಂ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಹೆಗ್ಡೆ, ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಹರೀಶ್ ಆಚಾರ್ಯ ರಾಯಿ, ಎಸ್ ಡಿ.ಎಂ.ಸಿ. ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು, ಉಮೇಶ್ ಗೌಡ ಮಂಚಕಲ್ಲು, ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ಹರೀಶ್ ಪೂಜಾರಿ ನಯನಾಡು ,ವಿಶ್ವನಾಥ ಪೂಜಾರಿ ಪಂಜಿಕಲ್ಲು ಪ್ರಮುಖರಾದ ಹರೀಶ್ ಶೆಟ್ಟಿ ನಯನಾಡು, ಪರಮೇಶ್ವರ ಪೂಜಾರಿ, ಮಾಧವ ಪರವ, ಜಯ ಶೆಟ್ಟಿ.ಮುಖ್ಯೊಪಾಧ್ಯಯರುಗಳಾದ ಸಿಪ್ರಿಯನ್ ಡಿಸೋಜಾ, ಲೋನಾ ಲೋಬೊ, ಪ್ರತಿಭಾ ಅಶೋಕ್ ಕುಮಾರ್, .ದುರ್ಗಾಪ್ರಸಾದ್, ಅಧ್ಯಾಪಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಎಸ್ ಡಿಎಂಸಿ ಸದಸ್ಯರು ಹಾಜರಿದ್ದರು ಮಹೇಶ್ ಎಂ ಕೆ ಸ್ವಾಗತಿಸಿದರು. ಸೌಮ್ಯ ವಂದಿಸಿದರು.
Be the first to comment on "ಇಡಿಆರ್ ಟಿ ಟ್ರಸ್ಟ್ ಬೆಂಗಳೂರು ವತಿಯಿಂದ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ವಿತರಣೆ"