ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಬಂಟ್ವಾಳದ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ಚರ್ಚ್ ಪಾಲಕಿಯಾದ ಮಾತೆ ಮರಿಯಮ್ಮನವರ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಧರ್ಮಸಭೆಯಲ್ಲಿ ಒಗ್ಗೂಡಿ ಮುನ್ನಡೆಯಲು, ಲೊರೆಟ್ಟೊಮಾತೆಯು ಸದಾ ನಮ್ಮೊಂದಿಗಿರಲು ಎಂಬ ಧ್ಯೇಯವಾಕ್ಯದೊಂದಿಗೆ ಪ್ರಧಾನ ಧರ್ಮಗುರುಗಳಾದ ಮೂಡಬಿದಿರೆ ವಲಯದ ಪಾಲಡ್ಕ ಚರ್ಚಿನ ಧರ್ಮಗುರುಗಳಾದ ವಂ. ಎಲ್ಯಾಸ್ ಡಿಸೋಜಾ ಪ್ರವಚನ ನೀಡಿ ನೂರಾರು ಭಕ್ತಾದಿಗಳು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳೊಂದಿಗೆ ಪವಿತ್ರ ಬಲಿಪೂಜೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು.
ಡಿ.1ರಿಂದ ಒಂಭತ್ತು ದಿನಗಳ ಕಾಲ ಮಾತೆ ಮರಿಯಮ್ಮನವರ ಚರಣಕ್ಕೆ ನೊವೆನಾ ಪ್ರಾರ್ಥನೆ ಸಲ್ಲಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಪ್ರಾನ್ಸಿಸ್ ಕ್ರಾಸ್ತಾ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭ ಹಬ್ಬ ಆಚರಿಸಲು ಸಹಕರಿಸಿದವರಿಗೆ ಗೌರವಪೂರ್ವಕವಾಗಿ ಮೇಣದ ಬತ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಲೊರೆಟ್ಟೊ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ವಂ. ಜೆಸನ್ ಮೋನಿಸ್, ಬಂಟ್ವಾಳ ವಲಯ ಪ್ರಧಾನ ಧರ್ಮಗುರುಗಳಾದ ವಂ.ವಲೇರಿಯನ್ ಡಿಸೋಜ ಹಾಗೂ ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರುಗಳಾದ ಪೌಲ್ ಸಿಕ್ವೇರಾ ಉಪಸ್ಥಿತರಿದ್ದರು. ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಚರ್ಚ್ ವ್ಯಾಪ್ತಿಯ ವಾಳೆಗಳ ಗುರ್ಕಾರ್ ಅವರನ್ನು ಚರ್ಚ್ ಪಾಲನಾ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಚರ್ಚ್ ಪಾಲನಾ ಮಂಡಳಿ ಸಂಭ್ರಮದ ಮೇಲುಸ್ತುವಾರಿ ವಹಿಸಿತ್ತು.
Be the first to comment on "ಬಂಟ್ವಾಳ ಲೊರೆಟ್ಟೊ ಮಾತಾ ಚರ್ಚ್ : ಸಂಭ್ರಮದಿಂದ ನಡೆದ ಮಾತೆ ಮರಿಯಮ್ಮನವರ ಹಬ್ಬ"