





ಬಂಟ್ವಾಳ: ಎಸ್.ಎಸ್. ಕಲಾ ಸಂಗಮ ಬೆಂಗಳೂರು ಏರ್ಪಡಿಸಿದ ಪ್ರತಿಷ್ಟಿತ ಕಲಾಸಂಗಮ ರಾಜ್ಯ ಪ್ರಶಸ್ತಿಗೆ ಬಿ.ಸಿ.ರೋಡಿನ ರೋಟೇರಿಯನ್ ಪ್ರೊಫೆಸರ್ ಡಾ. ಗೋವರ್ಧನ್ ರಾವ್ ಆಯ್ಕೆಯಾಗಿದ್ದು, ಬೆಂಗಳೂರಿನ ಕನ್ನಡ ಭವನದ ನಯನ ಕಲಾಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರಧಾನದಲ್ಲಿ ಪ್ರಶಸ್ತಿ ಹಾಗೂ ಗೌರವವನ್ನು ಸ್ವೀಕರಿಸಿದರು. ಸುಮಾರು ೬೦ ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಹಿರಿಯರ, ಕಿರಿಯರ ಸೇವೆಯನ್ನು ಗುರುತಿಸಿ ಪ್ರಖ್ಯಾತ ಗಾಯಕ ಶಶಿಧರ ಕೋಟೆ, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ನಜ್ಮಾ ಪಾರೂಖ್ ಮುಂತಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಡಾ. ಗೋವರ್ಧನರಾವ್ ಅವರಿಗೆ ಕಲಾಸಂಗಮ ರಾಜ್ಯಪ್ರಶಸ್ತಿ"