





ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿನ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ, ಮೂವರು ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ರಘುನಾಥ ಶೆಟ್ಟಿ ಅವರ ಪತ್ನಿ ಜಯಂತಿ (49), ಮಕ್ಕಳಾದ ರಕ್ಷಿತಾ (24) ಮತ್ತು ಪ್ರಜೀತಾ (19) ಗಾಯಗೊಂಡವರು. ಇವರನ್ನು ಚಿಕಿತ್ಸೆಗಾಗಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ
ಘಟನೆಯಲ್ಲಿ ಮನೆ ಸಂಪೂರ್ಣ ಬಿರುಕುಬಿಟ್ಟಿದ್ದು, ವಿದ್ಯುತ್ ಮೀಟರ್ ಹಾಗೂ ವಯರ್ ಗಳು ಸಂಪೂರ್ಣ ಕೆಟ್ಟುಹೋಗಿವೆ. ಸಿಡಿಲು ಬಡಿಯುವ ವೇಳೆ ಪ್ರಜಿತ ಅವರಿಗೆ ಆನ್ ಲೈನ್ ಕ್ಲಾಸು ನಡೆಯುತ್ತಿದ್ದು ಅವರು ಮೊಬೈಲ್ ಇಯರ್ ಪೋನ್ ಬಳಸಿ ಮನೆಯ ಕೋಣೆಯಲ್ಲಿ ಕ್ಲಾಸ್ ನ ಪಾಠ ಕೇಳುತ್ತಿದ್ದರು, ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್ , ಉಪಾಧ್ಯಕ್ಷೆ ಶೀಲಾನಿರ್ಮಲ ವೇಗಸ್, ಸದಸ್ಯ ರಾದ ಅಬ್ದುಲ್ ರಹಮಾನ್, ಜಯಪ್ರಸಾದ್, ಸಂದೀಪ್, ಗ್ರಾಮ ಕರಣೀಕ ಕರಿಬಸಪ್ಪ ಬೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ.





Be the first to comment on "ವೀರಕಂಭ ಕಲ್ಮಲೆ ಎಂಬಲ್ಲಿ ಸಿಡಿಲು ಬಡಿದು ಮೂವರಿಗೆ ಗಾಯ, ಮನೆಯ ಸೊತ್ತುಗಳಿಗೆ ಹಾನಿ"