
ಕಳೆದ ಐದು ತಿಂಗಳಿಂದ ಕರ್ನಾಟಕ ರಾಜ್ಯದಲ್ಲಿರುವ ಸಾವಿರಾರು ದಿವ್ಯಾಂಗರಿಗೆ ಅರ್ಹವಾಗಿ ದೊರಕಬೇಕಾಗಿದ್ದ ಸರಕಾರದ ಪಿಂಚಣಿ/ಮಾಸಾಶನ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ, ದಿವ್ಯಾಂಗರು ಮತ್ತು ಅವರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ದಿವ್ಯಾಂಗರಾಗಿರುವುದೇ ಮಾನದಂಡವಾಗಿದ್ದು, ಇದಕ್ಕೆ ಮತ್ತಷ್ಟು ಕಟ್ಟುಪಾಡುಗಳನ್ನು ವಿಧಿಸಬೇಡಿ ಎಂದು ಈ ಮೂಲಕ ಕರ್ನಾಟಕ ರಾಜ್ಯ ಸರಕಾರವನ್ನು ರಾಜ್ಯದಲ್ಲಿರುವ ಸಮಸ್ತ ಪಿಂಚಣಿ, ಮಾಸಾಶನ ವಂಚಿತ ದಿವ್ಯಾಂಗರು ಕೋರಿದ್ದಾರೆ.

ದೈಹಿಕ ಮತ್ತು ಮಾನಸಿಕ ವೈಕಲ್ಯ ಹೊಂದಿದ ಮಕ್ಕಳನ್ನು ಹೊಂದಿದವರಿಗೆ ಸರಕಾರ ನೀಡುವ ಸಣ್ಣ ಮೊತ್ತವೂ ದೊಡ್ಡದೇ ಆಗುತ್ತದೆ. ಉತ್ತಮ ಭವಿಷ್ಯಕ್ಕೆ ಸೇತುವಾಗುತ್ತದೆ. ಆದರೆ ಈಗಲೂ ವಾರ್ಷಿಕ ಆದಾಯ ಮಿತಿ 32,000 ಎಂಬ ನಿಯಮವನ್ನು ಬೊಟ್ಟು ಮಾಡಿ, ಸೌಲಭ್ಯಗಳ ನಿರಾಕರಣೆ ಮಾಡುವುದು ಸರಿಯಲ್ಲ ಎಂಬ ಕುರಿತು ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಆಯೋಜಿಸಿತು.
ರಾಜ್ಯ ಸರಕಾರ ಕೆಲ ತಿಂಗಳಿಂದ ಮಾಸಾಶನ ನೀಡಲು ವಾರ್ಷಿಕ ಆದಾಯ ಮಿತಿಯನ್ನು ಕಡ್ಡಾಯಗೊಳಿಸಿದ್ದು, ಈ ಕಾರಣದಿಂದ ಹಲವು ದಿವ್ಯಾಂಗರು ವಂಚಿತರಾಗುತ್ತಿದ್ದಾರೆ. ದಿವ್ಯಾಂಗರಾಗಿರುವುದೇ ಮಾಸಾಶನ ನೀಡಲು ಅರ್ಹತೆಯಾಗಿರಬೇಕೇ ವಿನಃ ಕುಟುಂಬದ ಆರ್ಥಿಕ ಕಾರಣದ ನೆಪವೊಡ್ಡಿ ನಿಲ್ಲಿಸಬೇಡಿ ಎಂದು ವಿಶೇಷಚೇತನರ ಪರವಾಗಿ ಕೆಲಸ ಮಾಡುವ ಸಕ್ಷಮ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಇದರಿಂದ ಸಾವಿರಾರು ದಿವ್ಯಾಂಗರು ವಂಚಿತರಾಗಿದ್ದು, ಸರಕಾರ ಈ ಕುರಿತು ಗಮನಹರಿಸಬೇಕು ಎಂದರು.
ರಾಜ್ಯ ಪ್ರಶಸ್ತಿ ದೊರತರೂ ಪಿಂಚಣಿಗೆ ಖೊಕ್:
ವಿಕಲಚೇತನ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ದೊರೆತರೂ ಇದೀಗ ಮಾಸಾಶನಕ್ಕೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಕಳೆದ ನಾಲ್ಕು ತಿಂಗಳಿಂದ ಆದಾಯದ ಮಿತಿ ಹೆಚ್ಚಳದ ನೆಪ ಹೇಳಿ ಮಾಶಾಸನ ಕೊಡುವುದನ್ನು ನಿಲ್ಲಿಸಲಾಗಿದೆ ಎಂದು ಸಕ್ಷಮದ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಪ್ರತಿನಿಧಿ ಮತ್ತು ವಿಕಲಚೇತನ ರಾಜ್ಯ ಪ್ರಶಸ್ತಿ ಪುರಸ್ಕೃತೆ ಸುಧಾರತ್ನ ಈ ಸಂದರ್ಭ, ಹೇಳಿದರು.
ಎಲ್ಲಾ ದಿವ್ಯಾಂಗರು ಒಟ್ಟಾಗಿ ಸಭೆ ನಡೆಸಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಮಂಡಿಸುವುದೂ ಅಷ್ಟು ಸುಲಭವಲ್ಲ. ಕೆಲವರಿಗೆ ನಡೆಯಲು ಸಾಧ್ಯವಿಲ್ಲ, ಕೆಲವರಿಗೆ ಮಾತನಾಡಲು ಸಾಧ್ಯವಿಲ್ಲ, ಇನ್ನು ಕೆಲವರು ದೃಷ್ಟಿ ಸಮಸ್ಯೆ, ಬೌದ್ಧಿಕ ವೈಕಲ್ಯ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಹಕ್ಕಿಗಾಗಿ ಹೋರಾಡುವುದೇ ಅವರಿಗೆ ಸವಾಲಾಗುತ್ತದೆ ಎಂದವರು ಹೇಳಿದರು.
ಜನಪ್ರತಿನಿಧಿಗಳೇ ನಮ್ಮ ಧ್ವನಿಯಾಗಿ:
ವಿಶೇಷಚೇತನ ಮಗುವಿನ ತಂದೆಯಾಗಿರುವ ಸಕ್ಷಮ ಸದಸ್ಯ ಹರೀಶ್ ಮಾಂಬಾಡಿ ಮಾತನಾಡಿ, ವಾರ್ಷಿಕ ಆದಾಯ 32000 ಇರಬೇಕು ಎಂಬ ಆರ್ಥಿಕ ಮಾನದಂಡದಿಂದ ನನ್ನ ಮಗಳು ಮಾಸಾಶನದಿಂದ ವಂಚಿತಳಾಗಿದ್ದಾಳೆ. ನಮ್ಮ ಜನಪ್ರತಿನಿಧಿಗಳು ಈ ಕುರಿತು ಸದನದಲ್ಲಿ ವಿಶೇಷಚೇತನರ ಪರ ಧ್ವನಿ ಎತ್ತಬೇಕು, ಪ್ರತಿಯೊಬ್ಬ ಜನಪ್ರತಿನಿಧಿಯ ಕಚೇರಿಗೆ ವಿಶೇಷಚೇತನರು, ಅವರ ಹೆತ್ತವರು ಬಂದು ಮನವಿ ನೀಡಲು ಕಷ್ಟವಾಗುತ್ತದೆ ಎಂಬ ದೃಷ್ಟಿಯಲ್ಲಿ ಈ ಮೂಲಕ ಗಮನ ಸೆಳೆಯುತ್ತಿದ್ದೇವೆ ಎಂದು ಮನವಿ ಮಾಡಿದರು.
ಸಕ್ಷಮ ಉಪಾಧ್ಯಕ್ಷ ಗಣೇಶ್ ಭಟ್ ವಾರಣಾಸಿ, ದಿವ್ಯಾಂಗರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಪಿಂಚಣಿ ಅಥವಾ ಸೌಲಭ್ಯ ನೀಡುವಾಗ ದಿವ್ಯಾಂಗರಾಗಿರುವುದೇ ಒಂದು ಮಾನದಂಡವನ್ನಾಗಿಸಬೇಕೇ ಹೊರತು, ಅವರ ಕುಟುಂಬದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನಲ್ಲ. ಮಾಸಾಶನ ನೀಡುವಲ್ಲಿ ಜಿಪುಣತನ, ಕಟ್ಟುಪಾಡುಗಳು ಬೇಡ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಸರಕಾರ ಮತ್ತು ಸಮಾಜ ಭರವಸೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ.
ಎಲ್ಲಾ ದಿವ್ಯಾಂಗರು ಒಟ್ಟಾಗಿ ಸಭೆ ನಡೆಸಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಮಂಡಿಸುವುದೂ ಅಷ್ಟು ಸುಲಭವಲ್ಲ. ಕೆಲವರಿಗೆ ನಡೆಯಲು ಸಾಧ್ಯವಿಲ್ಲ, ಕೆಲವರಿಗೆ ಮಾತನಾಡಲು ಸಾಧ್ಯವಿಲ್ಲ, ಇನ್ನು ಕೆಲವರು ದೃಷ್ಟಿ ಸಮಸ್ಯೆ, ಬೌದ್ಧಿಕ ವೈಕಲ್ಯ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಹಕ್ಕಿಗಾಗಿ ಹೋರಾಡುವುದೇ ಅವರಿಗೆ ಸವಾಲು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಕ್ಷಮ ದಕ್ಷಿಣ ಕನ್ನಡ ಕಾರ್ಯದರ್ಶಿ ಹರೀಶ್ ಪ್ರಭು, ಜಂಟಿ ಕಾರ್ಯದರ್ಶಿ ಭಾಸ್ಕರ ಹೊಸಮನೆ, ಕೋಶಾಧಿಕಾರಿ ಸತೀಶ್ ರಾವ್, ಮಹಿಳಾ ಆಯಾಮ ಪ್ರಮುಖ್ ಗೀತಾ ಲಕ್ಷ್ಮೀಶ, ಜ್ಯೋತ್ಸ್ನಾ ಅಡಿಗ ಉಪಸ್ಥಿತರಿದ್ದರು. READ MORE ಮುಂದೆ ಓದಿರಿ

ಮಾನಸಿಕ ಹಾಗೂ ದೈಹಿಕ ವೈಕಲ್ಯವನ್ನು ಹೊಂದಿದವರ ಪೋಷಣೆ, ಆರೈಕೆ ಹಾಗೂ ಸಮಾಜದಲ್ಲಿ ತೊಡಗಿಸಿಕೊಳ್ಳುವಿಕೆ ಇಂದು ದೊಡ್ಡ ಸವಾಲು. ಇಂಥ ಮಕ್ಕಳ ಪೋಷಕರೂ ಸಮಾಜದ ಮುಂದೆ ತಲೆಎತ್ತಿ ನಿಲ್ಲುವಂತೆ ಮಾಡಬೇಕಾಗಿರುವುದು ತುರ್ತು ಅಗತ್ಯ. ಸಮಾಜ ನಮ್ಮೊಂದಿಗೆ ನಿಲ್ಲಬೇಕಾಗಿದೆ. ಸರಕಾರ ಈ ರೀತಿ ಪಿಂಚಣಿ/ಮಾಸಾಶನವನ್ನು ಆದಾಯದ ಮಿತಿ ಹೇರಿ ನಿಲ್ಲಿಸಿದರೆ, ದಿವ್ಯಾಂಗರ ಭವಿಷ್ಯಕ್ಕೆ ಕೊಡಲಿಯೇಟು ನೀಡಿದಂತಾಗುತ್ತದೆ


ಹೀಗಾಗಿ ಪಿಂಚಣಿ ಅಥವಾ ಸೌಲಭ್ಯ ನೀಡುವಾಗ ದಿವ್ಯಾಂಗರಾಗಿರುವುದೇ ಒಂದು ಮಾನದಂಡವನ್ನಾಗಿಸಬೇಕೇ ಹೊರತು, ಅವರ ಕುಟುಂಬದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನಲ್ಲ. ಮಾಸಾಶನ ನೀಡುವಲ್ಲಿ ಜಿಪುಣತನ, ಕಟ್ಟುಪಾಡುಗಳು ಬೇಡ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಸರಕಾರ ಮತ್ತು ಸಮಾಜ ಭರವಸೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ.ಮುಂದೆ ಓದಿರಿ

ಎಲ್ಲಾ ದಿವ್ಯಾಂಗರು ಒಟ್ಟಾಗಿ ಸಭೆ ನಡೆಸಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಮಂಡಿಸುವುದೂ ಅಷ್ಟು ಸುಲಭವಲ್ಲ. ಕೆಲವರಿಗೆ ನಡೆಯಲು ಸಾಧ್ಯವಿಲ್ಲ, ಕೆಲವರಿಗೆ ಮಾತನಾಡಲು ಸಾಧ್ಯವಿಲ್ಲ, ಇನ್ನು ಕೆಲವರು ದೃಷ್ಟಿ ಸಮಸ್ಯೆ, ಬೌದ್ಧಿಕ ವೈಕಲ್ಯ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಹಕ್ಕಿಗಾಗಿ ಹೋರಾಡುವುದೇ ಅವರಿಗೆ ಸವಾಲು. ಮುಂದೆ ಓದಿರಿ

ದಿವ್ಯಾಂಗರ ಜೀವನದಲ್ಲಿ ಮಾಸಾಶನವು ಕೇವಲ ಆರ್ಥಿಕ ನೆರವಲ್ಲ; ಅದು ಅವರ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಬದುಕಿನ ಭದ್ರತೆಯ ಸಂಕೇತವಾಗಿದೆ. ಆದ್ದರಿಂದ ಸರ್ಕಾರವು ಈ ವಿಷಯವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ, ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕೆಂಬುದು ನಮ್ಮೆಲ್ಲರ ವಿನಮ್ರ ಮನವಿ ಎಂದವರು ತಿಳಿಸಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಸ್ವತಃ ದಿವ್ಯಾಂಗರೂ ಆಗಿರುವ ಕಲಾವಿದೆ ಸುಧಾರತ್ನ ಮಂಗಳೂರು ಬರೆದುಕೊಂಡಿದ್ದು, ಅದರ ವಿವರಕ್ಕೆ ಮುಂದೆ ಓದಿರಿ
ದಿವ್ಯಾಂಗರ ಮಾಸಾಶನವನ್ನು ಪುನರಾರಂಭಿಸುವಂತೆ ಮನವಿ
ಇತ್ತೀಚಿನ ದಿನಗಳಲ್ಲಿ ಹಲವು ವರ್ಷಗಳಿಂದ ದಿವ್ಯಾಂಗರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು ಕೆಲವು ಫಲಾನುಭವಿಗಳಿಗೆ ಸ್ಥಗಿತಗೊಳಿಸಿರುವ ವಿಷಯ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ, ಕುಟುಂಬದಲ್ಲಿ ಎ.ಪಿ.ಎಲ್. (APL) ರೇಷನ್ ಕಾರ್ಡ್ ಇರುವ ಕಾರಣದಿಂದ ಮಾಸಾಶನವನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ದಿವ್ಯಾಂಗರು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಮನವಿಯನ್ನು ಸಲ್ಲಿಸುತ್ತಿದ್ದೇನೆ.
ನನ್ನ ಅಭಿಪ್ರಾಯದಲ್ಲಿ, ದಿವ್ಯಾಂಗರ ಮಾಸಾಶನಕ್ಕೆ ಎ.ಪಿ.ಎಲ್. ಅಥವಾ ಬಿ.ಪಿ.ಎಲ್. ಎಂಬ ಬೇಧ ಇರಬಾರದು. ಏಕೆಂದರೆ ಎ.ಪಿ.ಎಲ್. ಕಾರ್ಡ್ ಹೊಂದಿರುವ ಅನೇಕ ಕುಟುಂಬಗಳಲ್ಲಿಯೂ ತೀವ್ರ ವೈಕಲ್ಯ ಹೊಂದಿರುವ ದಿವ್ಯಾಂಗರು ಇದ್ದಾರೆ. ಕುಟುಂಬದ ಆದಾಯ ಅಥವಾ ರೇಷನ್ ಕಾರ್ಡ್‌ನ ವರ್ಗೀಕರಣವು ಅವರ ವೈಕಲ್ಯದ ತೀವ್ರತೆಯನ್ನು ಬದಲಾಯಿಸುವುದಿಲ್ಲ. ದಿವ್ಯಾಂಗರ ಆರೈಕೆ, ಚಿಕಿತ್ಸೆ, ಔಷಧೋಪಚಾರ, ಆಸ್ಪತ್ರೆಗೆ ತೆರಳುವ ಸಾರಿಗೆ ವೆಚ್ಚ ಸೇರಿದಂತೆ ಅನೇಕ ಹೆಚ್ಚುವರಿ ಖರ್ಚುಗಳನ್ನು ಕುಟುಂಬಗಳು ಭರಿಸಬೇಕಾಗುತ್ತದೆ.
ಅನೇಕ ಸಂದರ್ಭಗಳಲ್ಲಿ ದಿವ್ಯಾಂಗರ ತಂದೆ-ತಾಯಿಯರೂ ವಯೋವೃದ್ಧರಾಗಿದ್ದು, ಅವರ ಆರೋಗ್ಯ ಹಾಗೂ ಜೀವನ ನಿರ್ವಹಣೆಯ ಹೊಣೆಗಾರಿಕೆಯೂ ಕುಟುಂಬದ ಮೇಲಿದೆ. ಅವರಿಗೂ ಖಚುಗಳಿರುತ್ತದೆ, ಹೆಚ್ಚಿನ ದಿವ್ಯಾಂಗರಿಗೆ ಉದ್ಯೋಗ ಪಡೆಯುವುದು ಅಥವಾ ಉದ್ಯೋಗದಲ್ಲಿ ಮುಂದುವರಿಯುವುದು ತುಂಬಾ ಕಷ್ಟಕರ. ಆದ್ದರಿಂದ, ಸರ್ಕಾರದಿಂದ ದೊರೆಯುವ ಮಾಸಾಶನವೇ ಅವರ ವೈಯಕ್ತಿಕ ಅಗತ್ಯಗಳನ್ನು ಪೂರೈಸುವ ಪ್ರಮುಖ ಆಧಾರವಾಗಿರುತ್ತದೆ.

ದಿವ್ಯಾಂಗರಿಗೆ ಈ ಮಾಸಾಶನ ಕೇವಲ ಹಣವಲ್ಲ; ಅದು ಅವರ ಆತ್ಮಗೌರವದ ಸಂಕೇತವೂ ಆಗಿದೆ. ತಮ್ಮ ಅಗತ್ಯಗಳಿಗೆ ಮನೆಯವರ ಮುಂದೆ ಪ್ರತಿಬಾರಿ ಕೈಚಾಚದೆ, ಸ್ವಂತ ಹಣದಿಂದ ಸಣ್ಣಪುಟ್ಟ ಖರ್ಚುಗಳನ್ನು ನಿರ್ವಹಿಸುವ ಸಂತೋಷ ಅದರಲ್ಲಿ ಅಡಗಿದೆ. ಸಹಾಯ ಮಾಡಿದವರಿಗೆ ಒಂದು ಸಣ್ಣ ಕಾಣಿಕೆ ನೀಡಬೇಕೆಂದರೂ ಮನೆಯವರನ್ನೇ ಹಣಕ್ಕಾಗಿ ಕೇಳಬೇಕಾದ ಪರಿಸ್ಥಿತಿ ಅವರಿಗೆ ಮುಜುಗರವನ್ನುಂಟು ಮಾಡುತ್ತದೆ. ಮಾಸಾಶನ ಸ್ಥಗಿತಗೊಂಡಿರುವುದರಿಂದ ಆ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ.
ತೀವ್ರ ವೈಕಲ್ಯ ಹೊಂದಿರುವ ಅನೇಕ ದಿವ್ಯಾಂಗರಿಗೆ ಆರೈಕೆ ಮಾಡುವ ವ್ಯಕ್ತಿಯ ಅಗತ್ಯವಿರುತ್ತದೆ. ಅವರಿಗೆ ನೀಡಬೇಕಾದ ಸಂಬಳವೂ ಹೆಚ್ಚುವರಿ ಹೊರೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮಾಸಾಶನವು ಕುಟುಂಬಕ್ಕೆ ಒಂದು ಮಹತ್ವದ ನೆರವಾಗುತ್ತಿತ್ತು.
ಮಾಸಾಶನ ಪುನರಾರಂಭವಾಗಬೇಕಾದರೆ ಗ್ರಾಮ ಆಡಳಿತಾಧಿಕಾರಿ (VA) ಅವರನ್ನು ಭೇಟಿ ಮಾಡಬೇಕು ಅಥವಾ ಜಿಲ್ಲಾಧಿಕಾರಿ (DC) ಕಚೇರಿಯಲ್ಲಿ ವಿಚಾರಿಸಬೇಕು ಎಂದು ಹೇಳಲಾಗುತ್ತಿದೆ. ಆದರೆ ದಿವ್ಯಾಂಗರಿಗೆ ಕಚೇರಿಗಳಿಗೆ ಅಲೆದಾಡುವುದು ಸುಲಭವಲ್ಲ. ಮನೆಯವರಿಗೂ ತಮ್ಮ ಉದ್ಯೋಗ, ಕುಟುಂಬದ ಜವಾಬ್ದಾರಿಗಳ ನಡುವೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಷ್ಟವಾಗುತ್ತದೆ. ಇದರಿಂದ ಅನೇಕರು ಪ್ರಯತ್ನವನ್ನೇ ಕೈಬಿಡುವ ಪರಿಸ್ಥಿತಿ ಉಂಟಾಗುತ್ತದೆ. ದಿವ್ಯಾಂಗರ ತಂದೆ ತಾಯಿಯವರಾದರೆ ನಮ್ಮ ಮಕ್ಕಳಿಗೆ ಸಿಗಲಿ ಎಂಬ ಭಾವನೆಯಿಂದ ಹೇಗಾದರೂ ಕಷ್ಟಪಟ್ಟು ಮಾಡಿಸುವ ಸಾಧ್ಯತೆ ಇದೆ
ಕೆಲವು ಕುಟುಂಬಗಳಲ್ಲಿ ದಿವ್ಯಾಂಗರನ್ನು ನಿರ್ಲಕ್ಷಿಸುವ ಅಥವಾ ತಿರಸ್ಕರಿಸುವ ಘಟನೆಗಳೂ ಕಂಡುಬರುತ್ತವೆ. ಅಂತಹ ಸಂದರ್ಭಗಳಲ್ಲಿ ಅವರಿಗೆ ಬರುತ್ತಿದ್ದ ಮಾಸಾಶನವೇ ಒಂದು ರೀತಿಯ ಭದ್ರತೆಯಾಗಿತ್ತು. ಈಗ ಅದೂ ಇಲ್ಲದಿದ್ದರೆ ಅವರ ಪರಿಸ್ಥಿತಿ ಇನ್ನಷ್ಟು ದುಸ್ತರವಾಗುವ ಸಾಧ್ಯತೆ ಇದೆ.
ಎಲ್ಲಾ ದಿವ್ಯಾಂಗರು ಒಟ್ಟಾಗಿ ಸಭೆ ನಡೆಸಿ ಅಥವಾ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಮಂಡಿಸುವುದೂ ಅಷ್ಟು ಸುಲಭವಲ್ಲ. ಕೆಲವರಿಗೆ ನಡೆಯಲು ಸಾಧ್ಯವಿಲ್ಲ, ಕೆಲವರಿಗೆ ಮಾತನಾಡಲು ಸಾಧ್ಯವಿಲ್ಲ, ಇನ್ನು ಕೆಲವರು ದೃಷ್ಟಿ ಸಮಸ್ಯೆ, ಬೌದ್ಧಿಕ ವೈಕಲ್ಯ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಹಕ್ಕಿಗಾಗಿ ಹೋರಾಡುವುದೇ ಅವರಿಗೆ ಸವಾಲಾಗುತ್ತದೆ. ಆದಾಗ್ಯೂ, ಹಲವಾರು ಸಂಘ-ಸಂಸ್ಥೆಗಳು ದಿವ್ಯಾಂಗರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವುದು ಸಂತಸದ ಸಂಗತಿಯಾಗಿದೆ.
ಈ ಎಲ್ಲ ವಾಸ್ತವಾಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ದಿವ್ಯಾಂಗರ ಮಾಸಾಶನವನ್ನು ಮೊದಲಿನಂತೆ ಮುಂದುವರಿಸುವಂತೆ ವಿನಂತಿಸುತ್ತೇವೆ. ಒಂದು ವೇಳೆ ಅಗತ್ಯ ದಾಖಲೆಗಳನ್ನು ಪರಿಶೀಲಿಸುವ ಅವಶ್ಯಕತೆ ಇದ್ದರೆ, ದಿವ್ಯಾಂಗರು ಕಚೇರಿಗಳಿಗೆ ಅಲೆದಾಡುವಂತೆ ಮಾಡುವ ಬದಲು ಸರ್ಕಾರವೇ ಅಧಿಕಾರಿಗಳನ್ನು ನಿಯೋಜಿಸಿ, ಅವರ ಮನೆಗಳಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ, ಅರ್ಹರಿಗೆ ಯಾವುದೇ ತೊಂದರೆಯಾಗದಂತೆ ಮಾಸಾಶನವನ್ನು ಮರುಪ್ರಾರಂಭಿಸುವ ವ್ಯವಸ್ಥೆ ಮಾಡಬೇಕು.
ದಿವ್ಯಾಂಗರ ಜೀವನದಲ್ಲಿ ಮಾಸಾಶನವು ಕೇವಲ ಆರ್ಥಿಕ ನೆರವಲ್ಲ; ಅದು ಅವರ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಬದುಕಿನ ಭದ್ರತೆಯ ಸಂಕೇತವಾಗಿದೆ. ಆದ್ದರಿಂದ ಸರ್ಕಾರವು ಈ ವಿಷಯವನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ, ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕೆಂಬುದು ನಮ್ಮೆಲ್ಲರ ವಿನಮ್ರ ಮನವಿಯಾಗಿದೆ.
– ಸುಧಾರತ್ನ ಕೆ. ಎಸ್.
ನೊಂದ ದಿವ್ಯಾಂಗ ಚಿತ್ರಕಲಾವಿದೆ


Be the first to comment on "ಜನಪ್ರತಿನಿಧಿಗಳೇ, ದಿವ್ಯಾಂಗರ ಸಮಸ್ಯೆ ಆಲಿಸುವಿರಾ? ಪಿಂಚಣಿ/ಮಾಸಾಶನ ಪಡೆಯಲು ದಿವ್ಯಾಂಗರಾಗಿರುವೇ ಅರ್ಹತೆ ಎಂಬ ಗ್ಯಾರಂಟಿ ಒದಗಿಸಲು ಪ್ರಯತ್ನಿಸುವಿರಾ?"