ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ದೇವಸ್ಥಾನವೊಂದರ ವಠಾರದಲ್ಲಿ ಜನವರಿ 18ರಂದು ಇಬ್ಬರು ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಜಾಹೀರಾತು
ಹಾಸನ ಜಿಲ್ಲೆ ಅರಕಲಕೂಡು ಕೋಟೆಸಾಲುಗೇರಿ ನಿವಾಸಿಗಳಾದ ಲಕ್ಷ್ಮೀಯಮ್ಮ (60) ಮತ್ತು ಅಶ್ವಿನಿ (22) ಆರೋಪಿಗಳು. ಇವರಿಬ್ಬರೂ ಉಳಿ ಗ್ರಾಮದ ಮತ್ತು ತೆಂಕಕಜೆಕಾರು ಗ್ರಾಮದ ಮಹಿಳೆಯರಿಬ್ಬರ ಕುತ್ತಿಗೆಯಿಂದ ಸರವನ್ನು ಕಳವು ಮಾಡಿದ್ದರು ಎಂದು ದೂರು ನೀಡಲಾಗಿತ್ತು. ಆರೋಪಿಗಳಿಂದ 23 ಮತ್ತು 16 ಗ್ರಾಂ ತೂಕವುಳ್ಳ ಸರ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜುಮೊತ್ತ 1.37 ಲಕ್ಷ ರೂ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಚಿನ್ನದ ಸರ ಕಳವು ಆರೋಪಿಗಳ ಬಂಧನ"